27btl-Rai

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಒಂದು ಸಾವಿರ ಕೋಟಿಗೂ ಮಿಕ್ಕ ಅನುದಾನದಲ್ಲಿ ವಿವಿಧ ಮೂಲಭೂತ ಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದ್ದು, ಬಿಜೆಪಿ ಅಪ ಪ್ರಚಾರಕ್ಕೆ ಅಭಿವೃದ್ಧಿಯೇ ನನ್ನ ಉತ್ತರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

 ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಾಲೂಕಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾನು ಜಾತಿವಾದಿ ಮತ್ತು ಮತೀಯವಾದಿ ಅಲ್ಲ ಎಂಬುದನ್ನು ನನ್ನ ವಿರೋಧಿಗಳೂ ಒಪ್ಪುತ್ತಾರೆ. ತಾಲ್ಲೂಕಿನಲ್ಲಿ ಒಟ್ಟು 16 ದೇವಸ್ಥಾನಗಳ ಜೀಣರ್ಣೋದ್ಧಾರ ಸಮಿತಿ ಅಧ್ಯಕ್ಷನಾಗಿ ಆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಜಿಲ್ಲೆಯ ಒಟ್ಟು 333 ಅನುದಾನಿತ ಶಾಲೆಗಳ ಪೈಕಿ ಕಲ್ಲಡ್ಕ ಮತ್ತು ಪುಣಚಕ್ಕೆ ಕೊಲ್ಲೂರು ದೇವಳದ ಹುಂಡಿಯಿಂದ ಅನಧಿಕೃತವಾಗಿ ಬರುತ್ತಿದ್ದ ಮಾಸಿಕ ತಲಾ ರೂ. 40 ಲಕ್ಷ ಮೊತ್ತದ ನಗದು ಉಳಿಸಿ ಮೂಕಾಂಬಿಕೆ ಕೃಪೆಗೆ ಪಾತ್ರನಾಗಿದ್ದೇನೆ. ಶಬರಿಮಲೆ ಯಾತ್ರೆ, ನಾಗಮಂಡಲೋತ್ಸವ, ಸಾರ್ವಜನಿಕ ಗಣೇಶೋತ್ಸವ, ಅಯ್ಯಪ್ಪ ದೀಪೋತ್ಸವ ಮತ್ತಿತರ ಧಾಮರ್ಮಿಕ ಕಾರ್ಯಕ್ರಮ ನಡೆಸಿ ನಿಜವಾದ ರಾಮ ಭಕ್ತನಾಗಿದ್ದೇನೆ.

ಆದರೆ ಇಲ್ಲಿನ ದೇವಸ್ಥಾನಗಳಿಗೆ ನಯಾ ಪೈಸೆ ಕೊಡದೆ ಇತರ ಧರ್ಮಗಳನ್ನು ನಿಂದಿಸುವ ಮೂಲಕ ಹಿಂದೂ ಧರ್ಮದ ರಕ್ಷಕರಾಗಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.

ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಬೆಳಪು, ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮೊಹಮ್ಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮತ್ತಿತರರು ಮಾತನಾಡಿದರು.

27btl-Congress

ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್, ಕೆಪಿಸಿಸಿ ವೀಕ್ಷಕ ರಾಜಶೇಖರ ಕೋಟ್ಯಾನ್, ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ್ ಜೈನ್, ಮಂಜುಳಾ ಮಾಧವ ಮಾವೆ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಯು.ಕೆ ಮೋನು, ಇಬ್ರಾಹಿಂ ಕೋಡಿಜಾಲ್, ಜಗದೀಶ್ ಕೊಯಿಲ, ಟಿ.ಎಸ್.ಅಬ್ದುಲ್ಲ, ಉಮರ್ ಪಜೀರು, ಉಸ್ಮಾನ್ ಕರೋಪಾಡಿ, ಐಡಾ ಸುರೇಶ್, ಮಾಧವ ಎಸ್.ಮಾವೆ, ರಫೀಕ್ ಪಾಣೆಮಂಗಳೂರು, ಚಂದ್ರಶೇಖರ್ ಪೂಜಾರಿ, ವಾಸು ಪೂಜಾರಿ, ವಸಂತಿ ಚಂದಪ್ಪ, ಉಮೇಶ್ ಆಚಾರ್ಯ, ಎಪ್ರ್ರಿಯಂ ಸಿಕ್ವೇರಾ, ಮುಹಮ್ಮದ್ ಶರೀಫ್, ಸಂಪತ್ ಕುಮಾರ್ ಶೆಟ್ಟಿ, ಪರಮೇಶ್ವರ ಮೂಲ್ಯ, ಮುಹಮ್ಮದ್ ನಂದರಬೆಟ್ಟು, ಚಂದ್ರಶೇಖರ ಪೂಜಾರಿ, ಧನಲಕ್ಷ್ಮೀ ಸಿ.ಬಂಗೇರ, ಲುಕ್ಮಾನ್, ಆಲ್ಬಟರ್್, ರಮಾನಂದ ಸಪಲ್ಯ, ನವೀನ್ಚಂದ್ರ ಶೆಟ್ಟಿ, ಪ್ರಶಾಂತ್ ಕುಲಾಲ್, ಜಯಂತಿ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ರಾಜು ಕೋಟ್ಯಾನ್, ರುಸೈದ್, ವಿಜಯ ಕುಮಾರ್ ಕಡೇಶ್ವಾಲ್ಯ, ಹೊನ್ನಯ್ಯ, ಎಂ.ಬಿ.ಅಶ್ರಫ್, ಬಿ.ಕೆ.ಇದಿನಬ್ಬ ಮತ್ತಿತರರು ಇದ್ದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿ, ರವಿ ಕಕ್ಯಪದವು ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *