ಮಂಗಳೂರು: ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಪೈಕಿ ಓರ್ವನನ್ನು ರೌಡಿ ನಿಗ್ರಹ ದಳದ ಸಿಬ್ಬಂದಿ ಮೊರ್ಗನ್ಸ್ ಗೇಟ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಬಂದರ್ ಟೌನ್ ಕಂಪೌಂಡು ನಿವಾಸಿ ಮೊಹಮ್ಮದ್ ಸರ್ಫುದ್ದೀನ್(23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ: 2017ರ ಮಾರ್ಚ್ ತಿಂಗಳಿನಲ್ಲಿ ನಗರದ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಪರಾರಿ ಅಂಗಡಿ ಬಳಿ ಯುವತಿ ಒಬ್ಬಂಟಿಯಾಗಿದುದ್ದನ್ನು ಕಂಡ ಆರೋಪಿ ಸರ್ಫುದ್ದೀನ್ ತಂಡ ಸಿಗರೇಟ್ ಖರೀದಿಸುವ ನೆಪದಲ್ಲಿ ಅಲ್ಲಿಗೆ ಬಂದು ಮೊಬೈಲ್ ದರೋಡೆ ಗೈದು ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಮೊಹಮ್ಮದ್ ಸರ್ಫುದ್ದೀನ್ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಸುಲಿಗೆ ಮತ್ತು ದರೋಡೆ (ಎರಡು ಪ್ರಕರಣ), ಮಂಗಳೂರು ಪೂರ್ವ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿದೆ.

