280218_award (1)

ಮಂಗಳೂರು: ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಯುನಿಟಿ ಆಸ್ಪತ್ರೆಗೆ ಬೆಲ್ಜಿಯಂ ಬ್ರುಸೆಲ್ಸ್ ನಲ್ಲಿರುವ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್ ನ ಪ್ರತಿಷ್ಠಿತ “ವೈದ್ಯಕೀಯ ಸೇವಾ ಪ್ರಶಸ್ತಿ” ಲಭಿಸಿದೆ.

ಈ ಪ್ರಶಸ್ತಿ ಸ್ವೀಕರಿಸಿದ ಯುನಿಟಿ ಆಸ್ಪತ್ರೆ ಅಧ್ಯಕ್ಷ ಡಾ. ಸಿ.ಪಿ ಹಮೀದ್ ರಹ್ಮಾನ್ ಪ್ರತಿಕಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಂಗಳೂರು ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ತಾಣವಾಗಿ ಯುನಿಟಿಯನ್ನು ಪರಿವರ್ತಿತವಾಗುತ್ತಿದೆ. ಹೀಗಾಗಿ ಆರೋಗ್ಯ ಸೇವೆಯ ಗುಣಮಟ್ಟ, ಕಡಿಮೆ ವೆಚ್ಚದ ಚಿಕಿತ್ಸೆ, ಆರೋಗ್ಯ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮಗಳು ನರ್ಸಿಂಗ್ ಮತ್ತು ವೈದ್ಯಕೀಯ ಸೇವೆಯ ಹಲವು ಆಯಾಮಗಳನ್ನು ಪರಿಗಣಿಸುವ ಅಗತ್ಯವಿದೆ ಎಂದವರು, ಯುನಿಟಿ ಆಸ್ಪತ್ರೆ ಕಳೆದ ನಾಲ್ಕು ದಶಕಗಳಿಂದ ಸಲ್ಲಿಸುತ್ತಿರುವ ಅತ್ಯುತ್ತಮ ಆರೋಗ್ಯ ಸೇವೆಗೆ ಇದು ನೀಡಿದ ಗೌರವವಾಗಿದೆ ಎಂದು ಹರ್ಷ ವ್ಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ, ಮುಖ್ಯ ಕಾರ್ಯ ನಿರ್ವಾಹಕ ಡಾ. ಅನಂತ್ ಮೋಹನ್ ಪೈ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *