ಸುಳ್ಯ: ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ನಿವೃತ ದೈಹಿಕ ಶಿಕ್ಷಕ ತುಕರಾಮ್ ಏನೇಕಲ್ ತನ್ನ ವಿದ್ಯಾರ್ಥಿಗಳನ್ನು ಉತ್ಸಾಹ ಪಡಿಸಲು ಪ್ರಾರಂಭಿಸಿದ “ನಮ್ಮ ಕುಡ್ಲ ಚಾರಣ ಸಂಘ” ಇಂದು ದ.ಕ.ಜೆಲ್ಲೆಗೆ ವ್ಯಾಪಿಸಿ ಪರಿಸರ ರಕ್ಷಣೆ ಬಗ್ಗೆ ವಿನೂತನ ಅಭಿಯಾನ ನಡೆಸುತ್ತಿದೆ.
ಈ ಸಂಘ ವಿದ್ಯಾರ್ಥಿಗಳ ಮನರಂಜನೆಗೆಂದು ಸೀಮಿತವಾಗಿದ್ದು, ಬಳಿಕ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಜಯರಾಮನಿಂದ ಕರಾವಳಿಗೆ ಭಾಗಕ್ಕೆ ಹಬ್ಬಿ ನಲವತ್ತೆರಡು ಯುವಕರನ್ನು ಒಗ್ಗೂಡಿಸುವಲ್ಲಿ ಸಫಲವಾಯಿತು. ಅಲ್ಲದೆ, ಇತರ ಕ್ಷೇತ್ರದಲ್ಲಯೂ ಕಾರ್ಯಪ್ರವೃತ್ತಿಯಾಗಲೂ ಹೆಜ್ಜೆಯೊಂದನ್ನು ಇಟ್ಟಿತು. ಅದರಂತೆ “ಸ್ವಚ್ಛ ಕುಮಾರ ಪರ್ವತ ಅಭಿಯಾನ” ಪ್ರಾರಂಭಿಸಿ ಗುಡ್ಡಗಾಡುಗಳಲ್ಲಿರುವ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ಚಚ್ಛತೆಯ ಬಗ್ಗೆ ವಿನೂತನ ಮಾದರಿಯಲ್ಲಿ ಸ್ಥಳೀಯರಿಗೆ ಅರಿವು ಮೂಡಿಸಲು ಮುಂದಾಗಿ ಯಶಸ್ಸು ಕಂಡಿತು.
ಪರಿಸರವನ್ನು ಉಳಿಸುವ ಜವಾಬ್ದಾರಿಗೆ ಕೈ ಹಾಕುವುದರೊಂದಿಗೆ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯನ್ನು ತೋರ್ಪಡಿಸಲು ರಕ್ತದಾನ ಶಿಬಿರ, ನದಿರಿನಾರೆ ಸ್ವಚ್ಛ ಅಭಿಯಾನ, ಸರಕಾರಿ ಶಾಲೆಗಳಲ್ಲಿ ಪರಿಸರ ಉಳಿಸುವ ಕಾರ್ಯಗಾರ ಮುಂತಾದ ಹಲವಾರು ಯೋಜನೆ ರೂಪಿಸಿ ಕಾರ್ಯಗತಗೊಳಿಸಿತು.
ಇದೀಗ ಈ ತಂಡ ಕಿರು ಚಿತ್ರವೊಂದನ್ನು ಹೊರತರುವ ಹಂತದಲ್ಲಿದ್ದು, ಈ ಚಿತ್ರದ ವಿಶೇಷತೇನೆಂದರೆ ಇದರಲ್ಲಿ ಕುಮಾರ ಪರ್ವತದಲ್ಲಿ ಕಂಡು ಬರುವ “ಮಲೆ ಅಂಗಾರ” ಎನ್ನುವ ಸಸ್ಯದ ಲಕ್ಷಣಗಳ ಬಗ್ಗೆ ಜನಸಾಮಾನ್ಯರಿಗೆ ಕಣ್ಣಿಗೆ ಕಟ್ಟಲು ಸಿದ್ಧವಾಗಿದೆ. ಈ ಕಿರು ಚಿತ್ರ ಚಾರಣಿಗರಿಗೆ ಕುಮಾರ ಪರ್ವತದ ಕೈಪಿಡಿಯಾಗಲಿದೆ ಎನ್ನುವುದರಲ್ಲಿ ಇನ್ನೊಂದು ಮಾತಿಲ್ಲ.
ಇವೆಲ್ಲದಕ್ಕೂ ಬೆನ್ನೆಲುಬಾಗಿ ಮಾರ್ಗದರ್ಶನ ಹಾಗೂ ಸ್ಫೂರ್ತಿ ನೀಡುತ್ತಿರುವವರು ತುಕರಾಮ್ ಏನೇಕಲ್, ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಪ್ರಾಧ್ಯಾಪಕ ಬಾಲಕೃಷ್ಣ ಪೈ ಹಾಗೂ ದೇವಾಲಯದ ಸಿಬ್ಬಂದಿ ಪಿ. ಸುಬ್ರಹ್ಮಣ್ಯ ಭಟ್ ಅವರಾಗಿದ್ದಾರೆ ಎನ್ನುತ್ತೆ ಈ ತಂಡ.
ಇಂತಹ ಉತ್ಸಾಹಿ ತಂಡದ ಯುವಕರು ದೇಶಕ್ಕೆ ಮಾದರಿ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿಯಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕುಮಾರ ಪರ್ವತ ಸ್ವಚ್ಛ ಅಭಿಯಾನದಲ್ಲಿ ಭಾಗಿ: ಜಯರಾಮ, ತ್ರಿಲೇಶ್, ನಿತೇಶ್, ಧೀರಜ್, ಜಯದೇವ್, ಯತೀಶ್ , ಉದಯ್, ಮಂಥನ್ , ಪುರಂದರ ಮತ್ತಿತರರಿದ್ದರು.







