01010

ಸುಳ್ಯ: ಪ್ರೀತಿ ನಿರಾಕರಿಸಿದ ಸಿಟ್ಟಿನಿಂದ ಭಗ್ನ ಪ್ರೇಮಿಯೊಬ್ಬ ಯುವತಿ ಮೇಲೆ ನಡು ರಸ್ತೆಯಲ್ಲಿ ಚಾಕುವಿಂದ

ಇರಿದು ಹತ್ಯೆ ಮಾಡಿರುವ ಅಮಾನವೀಯ ಘಟನ ಇಲ್ಲಿನ ರಥ ಬೀದಿ ಯಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ನೆಹರು ಮೆಮೋರಿಯಲ್ ಕಾಲೇಜಿನ ಅಕ್ಷತ ಎನ್ನುವ ಹೆಸರಿನ ವಿದ್ಯಾರ್ಥಿಯನ್ನು ಅದೇ ಕಾಲೇಜಿನ ಕಾರ್ತಿಕ್ ಹೆಸರಿನ ವಿದ್ಯಾರ್ಥಿ ಪ್ರೀತಿಸುತ್ತಿದ್ದನಂತೆ. ಇದೇ ವೇಳೆ ಇಂದು ಮಧ್ಯಾಹ್ನದ ಹೊತ್ತಿನಲ್ಲಿ ಸುಳ್ಯದ ರಥಬೀದಿಯ ಬಿಎಸ್ ಎನ್ ಎಲ್ ಕಚೇರಿ ಎದುರು ನಡೆದು ಹೋಗುತ್ತಿದ್ದ ಅಕ್ಷತಳನ್ನು ಕಾರ್ತಿಕ್ ಭೇಟಿಯಾಗಿ ವಿದ್ಯಾರ್ಥಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ ಅಕ್ಷತ ಇದಕ್ಕೆ ಒಪ್ಪದೇ ಇದ್ದಗ ತನ್ನ ಬಳಿ ಇದ್ದ ಚಾಕುವಿನಿಂದ ಕಾರ್ತಿಕ್ ತಿವಿದು ಸಾಯಿಸಿದ್ದಾನೆ ಎನ್ನಲಾಗಿದೆ.

ಕೂಡಲೇ ಸ್ಥಳದಲ್ಲಿದ್ದ ಜನತೆ ಆರೋಪಿ ಕಾರ್ತಿಕ್ ನನ್ನು ಹಿಡಿದು ಪೋಲಿಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ನಡುವೆ ಆಕ್ಷತಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೂಡಲೇ ತೆಗೆದುಕೊಂಡು ಹೋಗಲಾಗಿದ್ದರು ಕೂಡ ಆಕೆ ತ್ರೀವ ರಕ್ತ ಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ.

0101

ಇದಲ್ಲದೇ ಕಾರ್ತಿಕ್ ಕೂಡ ಆಕೆಗೆ ಚಾಕುವಿನಿಂದ ತಿವಿದ ಕೂಡಲೇ ತಾನು ತನ್ನ ಕೈ ಕುಯ್ದುಕೊಂಡು ಸಾಯುವ ನಾಟಕ ಆಡಿದ್ದಾನೆ ಎನ್ನಲಾಗಿದ್ದು, ಸದ್ಯ ಆರೋಪಿ ಕಾರ್ತಿಕ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

65+52523

ಈ ಬಗ್ಗೆ ಸುಳ್ಯ ಪೋಲಿಸ್ ಠಾಠೆಯಲ್ಲಿ ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *