ಬಂಟ್ವಾಳ: ಮಂಗಳಾ ಫ್ರೆಂಡ್ಸ್ ಸರ್ಕಲ್ ಅಲೆತೂರು ಇದರ ಆಶ್ರಯದಲ್ಲಿ 24-02-2018ನೇ ಶನಿವಾರ ಅಲೆತೂರು ಪಂಜುರ್ಲಿ ದೈವಸ್ಥಾನದ ಬಳಿಯಿರುವ ಮಂಗಳಾ ಭವನದಲ್ಲಿ 19ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಜರಗಿತು. ಮಂಗಳಾ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರ ಭಾಕ್ತಾದಿಗಳು ಉಪಸ್ಥಿತರಿದ್ದರು.
