ಬಿಗ್ ಬಾಸ್ ಸೀಸನ್ 5 ನಲ್ಲಿ ರನ್ನರ್ ಆಫ್ ಆಗಿರುವ ದಿವಾಕರ್ ಅವರಿಗೆ ಕಿಚ್ಚ ಸುದೀಪ್ ಅವರು ಆರ್ಥಿಕ ಸಹಾಯ ಮಾಡಿರುವ ಸುದ್ದಿ ಹೊರಬಿದ್ದಿದೆ.
ಹೌದು, ಸಾಮಾನ್ಯ ವ್ಯಕ್ತಿಯಾಗಿ ದಿವಾಕರ್ ಅವರಿಗೆ ಬಿಗ್ ಬಾಸ್ ಮನೆಯಿಂದ ಸಾಕಷ್ಟು ಹಣ ಸಿಗಲಿಲ್ಲ ಎನ್ನುವ ಕೂಗು ಕೇಳಿ ಬಂದಿತ್ತು. ಇದೇ ವೇಳೆ ಅಭಿನಯ ಚಕ್ರವರ್ತಿ ಸುದೀಪ್, ದಿವಾಕರ್ ಅವರಿಗೆ ಪರ್ಸನಲ್ ಆಗಿ ಸಹಾಯ ಮಾಡಿದ್ದಾರೆ. ದಿವಾಕರ್ ದಂಪತಿಯನ್ನು ಮನೆಗೆ ಕರೆಸಿಕೊಂಡ ಸುದೀಪ್, ಇವರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ದೀವಾಕರ್ ಅವರು, ತಮ್ಮನ್ನು ಸುದೀಪ್ ಅವರು ಪ್ರೀತಿಯಿಂದ ನಡೆಸಿಕೊಂಡು, ಒಂದು ದೊಡ್ಡ ಮೊತ್ತದ ಹಣ ನೀಡಿದ್ದಾರೆ. ಈ ಹಣದಿಂದಲೇ ನಾನು ಮನೆಯನ್ನು ಕಟ್ಟಿಕೊಳ್ಳಲು ಯೋಚಿಸಿದ್ದೇನೆ. ಹಾಗೂ ತಮ್ಮ ಮುಂದಿನ ಚಿತ್ರಗಳಲ್ಲಿ ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಸುದೀಪ್ ಎಂದು ದಿವಾಕರ್ ಹೇಳಿದ್ದಾರೆ.

