ವಾಸ್ತು ಪ್ರಕಾರ..(ಕವನ)
“ಆಧುನಿಕ ಜೀವನದಲ್ಲಿ ಅರಿಯುವುದು ಏನು
ಹೈಟೆಕ್ ಜೀವನಕ್ಕೆ ಹಾತೊರೆಯುವುದು ಮನಸು
ಬಾಲ್ಯಕಾಲ ಜೀವನದ ಬೆಲೆಯನ್ನು ಅರಿತು
ಸಾಗಿಸಲು ಬಿಡುತ್ತಿಲ್ಲ ಹೊಸತನದ ಬದುಕು..!”
“ಹತ್ತಡಿ ಜಾಗದಲ್ಲಿ ಅಂಗಳ ಇಲ್ಲದ ಮಹಾಮನೆ
ಮೂರಿಂಚು ಅಂತರದಲ್ಲಿ ಇನ್ಯಾರದೊ ಮನೆ
ಅಲ್ಯಾರು ಇಲ್ಯಾರು ಇದುವರೆಗೂ ತಿಳಿದಿಲ್ಲ
ವಾಸ ಮಾಡಲು ಶುರು ಮಾಡಿ ಕಳೆದೆ ಹಲವು ವರ್ಷ..!”
“ರುದ್ರ ಭೂಮಿಯನ್ನು ಮೈದಾನ ಮಾಡಿ ಕಟ್ಟಿಹರು
ಕಟ್ಟಡಗಳ ಸಾಲು , ವಾಸ್ತು ಎಲ್ಲಿದೆ ವಸ್ತು ಎಲ್ಲಿದೆ
ಪ್ರೇತ ಪಿಶಾಚಿ ಅಂದರೆ ಮೂಢನಂಬಿಕೆ ಎನ್ನುವರು
ಬಳಲಿದ ಜೀವಕ್ಕೆ ಮನೆ ಮೂಲೆಯೆ ಕಾರಣ..!”
“ಪಟ್ಟಣದ ಪೊಟ್ಟಣದಂತ ಮನೆಯಲ್ಲಿ
ಜನ ಹೆಣವಾಗಿ ಕೊಳೆತು ಹೋದರು ತಿಳಿಯದು
ಕೊಲೆ ಸುಲಿಗೆಯಿಂದ ಬೇಸತ್ತು ಹೋದ ಜನರು
ಅಕ್ಕ ಪಕ್ಕ ಯಾರಿದ್ದರೂ ಮಾತನಾಡಲು ಹೆದರುವರು..!”
“ಯಾಕೆ ಬೇಕು ಈ ಹಾಳಾದ ಲೈಫು, ಹಾಲಂತ ಹಳ್ಳಿಯ
ಜನಮೈತ್ರಿಯ ಜಗವಿರುವಾಗ ,ಅಲ್ಲಿರುವುದೇ ಲೇಸು
ವಾಸ್ತುಪ್ರಕಾರ ಮನೆ ಜಾಗವಗೆದು,ಕ್ಷೀರಾಭಿಷೇಕ ಮಾಡಿ
ಕಲ್ಲೊಂದ ಹೂತು ಕಟ್ಟಿದ ಮನೆಯೇ ಸಾಕು.!”
ಕವಿ: ಅನ್ಸಾಲ್.ಸಿ, ಕಾವ್ಯದ ತವರೂರು
ಧನ್ಯವಾದಗಳು ನನ್ನ ವಾಸ್ತುಪ್ರಕಾರ ಕವನ ಪ್ರಕಟಿಸಿದ ಪತ್ರಿಕಾ ಬಳಗಕ್ಕೆ. ಕವನ ಇಷ್ಟವಾದರೆ ಎಲ್ಲರೂ ಹಂಚಿಕೊಳ್ಳಬೇಕಾಗಿ ವಿನಂತಿ