ಕೆಂಪಾದ ನಭವೀಗ
ನೇಸರನಿಗೆ ವಿದಾಯ
ಹೇಳುವ ಹೊತ್ತು …!!
ಉಂಡ ನೋವುಗಳಿಗೂ
ನೀನು ವಿದಾಯ ಹೇಳಿಬಿಡು..!
ನೀರಿನಲೆಗಳು ಶಾಂತವಾಗಿದೆ
ನೋವಿನಲೆಗಳಿಗೆ ಕರಗದೆ
ನೀನು ಶಾಂತನಾಗಿ ಬಿಡು …!
ಯಾವುದು ಚಿರವಲ್ಲ ಈ
ಕ್ಷಣವನ್ನೊಮ್ಮೆ ಬದುಕಿಬಿಡು …!
ಕತ್ತಲೆಯ ಕಾಡುವ ಚಿಂತೆಗಳಿಗೆ
ಚಿತೆ ಕಟ್ಟಿ ಸಿಗರೇಟಿನ
ಹೊಗೆಯಾಗಿಸಿ ಬಿಡು….!!!
ಮಸಣದ ಮಣ್ಣಾಗುವ
ಮೊದಲೊಮ್ಮೆ ಜಗದ ಕಣ್ಣಾಗಿ
ಮಿಂಚಂತೆ ಬೆಳಗಿಬಿಡು ..!!
ಸಂಚು ಹಾಕುವ ಜವನ
ಬಂಧನದಲಿ ಬಂಧಿಯಾಗುವ
ಮೊದಲು ಜಗವ ಸುಖಿಸಿಬಿಡು ..!!
ಮೌನದಲಿ ಕಾಡುವ
ಹಳೆಯ ಮಾತಿನ ವೇದನೆಗಳನ್ನು
ಖುಷಿಯ ಬೆಂಕಿಯಲ್ಲಿ ಸುಟ್ಟಿಬಿಡು ..!
ಕವಿ: ಪ್ರೇಮಾತ್ಮ ಗಣೇಶ್ ಅದ್ಯಪಾಡಿ ಮಂಗಳೂರು, 9620038356

