ಅಡ್ಡೂರು: ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ ಅಂಗ ಸಂಸ್ಥೆ ಎಸ್ಕೆಎಸ್ಸೆಸ್ಸೆಫ್ 28ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 29ನೇ ಹರುಷಕ್ಕೆ ಕಾಲಿಡುತ್ತಿರುವ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಕಾಂಜಿಲಕೋಡಿ ಶಾಖೆ ವತಿಯಿಂದ ಇಲ್ಲಿನ ಬದ್ರುಲ್ ಹುದಾ ಜುಮ್ಮ ಮಸೀದಿ ಎದುರು ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ಬದ್ರುಲ್ ಹುದಾ ಮಸೀದಿ ಖತೀಬ್ ಖಲೀಲ್ ದಾರಿಮಿ ಉಸ್ತಾದ್ ಮಾತನಾಡಿ, ಯುವ ಜನತೆ ಎಸ್ಕೆಎಸ್ಸೆಸ್ಸೆಫ್ ನಂತಹ ಉತ್ತಮ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜಮುಕಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಗುರುಪುರ ರೇಂಜ್ ಜಂಇಯತುಲ್ ಮುಹಲ್ಲಿಮೀನ್ ಕೊಶಾಧಿಕಾರಿ ಅಲ್ ಹಾಜ್ ಎಂ.ಎ. ಆದಂ ಉಸ್ತಾದ್ ಮಾತನಾಡಿ, ಸುನ್ನತ್ ಜಾಮಾತಿನ ಆದರ್ಶಗಳ ಬಗ್ಗೆ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಜಿಲಕೊಡಿ ಶಾಖೆ ಸಲಹೆಗಾರ ಹಾಗೂ ಜಮಾಅತ್ ಅಧ್ಯಕ್ಷ ಅಹ್ಮದ್ ಬಾವ ಅಧ್ಯಕ್ಷತೆ ವಹಿಸಿದ್ದರು. ಎಂ.ಎಚ್ ಹಾಜಿ ಅಡ್ಡೂರು, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಎಂ.ಎ ಮೊಹಮ್ಮದ್ ಕುಂಞಿ ಮಾಸ್ಟರ್, ಹಸನಬ್ಬ, ಸಮೀರ್ ನೂಯಿ, ನೌಫಲ್ ಕೊಡಿಬೆಟ್ಟು, ಕೋಶಾದಿಕಾರಿ ಮೊಹಮ್ಮದ್ ಶರೀಫ್ ಪೊನ್ನೆಲ, ಅಬ್ದುಲ್ ಅಝೀಝ್ ಪೊನ್ನೆಲ, ಟ್ರೆಂಡ್ ಅಬ್ದುಲ್ ರಶೀದ್ ಪೊನ್ನೆಲ, ಸರ್ಗಾಲಯಂ ಶಾಫೀ ಕಳಸಗುರಿ ಮುಹಿದ್ದೀನ್ ಸಹದಿ ಉಸ್ತಾದ್, ಸಿದ್ದೀಕ್ ದಾರಿಮಿ ಅಸೈಗೊಳಿ, ಕಿನ್ಯ, ಅಬ್ದುಲ್ ಜಬ್ಬಾರ್ ಪನೊಲಿಪಾದೆ ಹಾಗೂ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಧ್ಯಕ್ಷ ಹಾರಿಸ್ ಕಳಸಗುರಿ ಸ್ವಾಗತಿಸಿ, ಅಬ್ದುಲ್ ಸಲಾಂ ಕಾರ್ಯಕ್ರಮ ನಿರೂಪಿಸಿದರು.

