6

ಕುಪ್ಪೆಪದವು: ಗುರುಪುರ-ಕೈಕಂಬ ನಾಡಕಚೇರಿಯಲ್ಲಿ ಇತ್ತೀಚೆಗೆ ಹಕ್ಕು ಪತ್ರಕ್ಕಾಗಿ ಪ್ರತಿಭಟನೆ ನಡೆಸಿದ್ದ ಅರ್ಹ ಫಲಾನುಭವಿಗಳಿಗೆ ಶಾಸಕ ಮೊಯಿದ್ದೀನ್ ಬಾವಾ ಇಲ್ಲಿನ ಗ್ರಾ.ಪಂ. ಸಭಾವನದಲ್ಲಿ ಹಕ್ಕುಪತ್ರ ಬುಧವಾರ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ಕೈಕಂಬದಲ್ಲಿ ನಡೆದ ಹಕ್ಕು ಪತ್ರವಿತರಣಾ ಕಾರ್ಯಕ್ರಮಕ್ಕೆ ಕಾಗೋಡು ಸಚಿವ ಕಾಗೋಡು ತಿಮ್ಮಪ್ಪರವರು ಸಂಜೆ 6ಕ್ಕೆ ಬರಲಿದ್ದಾರೆ ಎಂದು ಸ್ಥಳೀಯ ಗ್ರಾ.ಪಂ. ಪ್ರಕಟನೆ ತಿಳಿಸಿತ್ತು. ಆದರೆ ಇದನ್ನು ತಪ್ಪು ಅರ್ಥೈಸಿಕೊಂಡ ಪತ್ರಿಕೆಗಳು ಮಧ್ಯಾಹ್ನದಿಂದ ಬಿಸಿಲಿನಲ್ಲಿ ಫಲಾನುಭವಿಗಳು ಕಾದು ಕುಳಿತಿದ್ದರು ಎಂದು ಪ್ರಕಟಿಸಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅನಿಲಭಾಗ್ಯ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಿದ ಬಳಿಕ ಮಂಗಳೂರೂ ಉತ್ತರ ವಿಧಾನ ಸಭ ಕ್ಷೇತ್ರ ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳ ಪ್ರಚುರಪಡಿಸುವ ಪುಸ್ತಕ ಹಾಗೂ ಕ್ಯಾಲೇಂಡರ್ ವಿತರಿಸುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕುಪ್ಪೆಪದವು ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಡಿ.ಪಿ.ಹಮ್ಮಬ್ಬ, ಪಿಡಿಒ ಮಂಜುನಾಥ್ ಗೌಡ, ಆಸೀಫ್, ಇಕ್ಬಾಲ್, ಆರ್.ಕೆ.ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.

kandavar2

ಕಂದಾವರ: ಗುರುಪುರ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಅಹ೯ ಫಲಾನುಭವಿಗಳಿಗೆ ಶಾಸಕ ಮೊಯಿದ್ದೀನ್ ಬಾವಾ ಹಾಗೂ ಜಿ.ಪಂ ಸದಸ್ಯ ಯು.ಪಿ ಇಬ್ರಾಹೀಂ ನೇತ್ರತ್ವದಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.

kandavara3-

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಸಚಿನ್ ಅಡಪ, ಕಂದಾವರ ಗ್ರಾ.ಪಂ. ಅಧ್ಯಕ್ಷ ವಿಜಯ ಸುವರ್ಣ, ಪಾಧ್ಯಕ್ಷ  ದೇವಣ್ಣ, ಪಿಡಿಒ ರೋಹಿಣಿ, ವಿಎ ಯಮುನಪ್ಪ ಹಾಗೂ ಗಾಯತ್ರಿ ಮತ್ತಿತರರಿದ್ದರು.

bandasale1

ಬಂಡಸಾಲೆ-ವಿಕಾಸ ನಗರ: ಇಲ್ಲಿನ ಅಹ೯ ಫಲಾನುಭವಿಗಳಿಗೆ ಎರಡು ವ್ಯಾಪ್ತಿಗೆ ಶಾಸಕ ಮೊಹಿಯುದ್ದೀನ್ ಬಾವಾ ನೇತೃತ್ವದಲ್ಲಿ ಭೇಟಿ ನೀಡಿ ಹಕ್ಕುಪತ್ರ ವಿತರಿಸಲಾಯಿತು.

bandasle2

ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ, ತಾ.ಪಂ ಸದಸ್ಯ ಸಚಿನ್ ಅಡಪ,ಗ್ರಾ.ಪಂ ಅಧ್ಯಕ್ಷೆ ತಿ ರುಕಿಯ,ಉಪಾಧ್ಯಕ್ಷ ಉದಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

bandasale5

vikas1

vikasa4

vikasa3

By Suddi9

Leave a Reply

Your email address will not be published. Required fields are marked *