ಪೊಳಲಿ: ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 183 ನೇ ಶುಭ ಜನ್ಮದಿನೋತ್ಸವವನ್ನು ಫೆ. 17 ರಂದು ಶನಿವಾರ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆಚರಿಸಲಾಗುವುದು. ಬೆಳಗ್ಗೆ 6.30ಕ್ಕೆ ವೇದಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ. 7.30 ಕ್ಕೆ ಪೂಜೆ, 8 ರಿಂದ 11 ಗಂಟೆಯವರೆಗೆ ಭಜನೆ, ನಂತರ ಹೋಮ, 12.30 ಕ್ಕೆ ಆರತಿ ಮಧ್ಯಾಹ್ನ 1 ಗಂಟೆಗೆ ಅನ್ನ ಪ್ರಸಾದ. 2 ಗಂಟೆಗೆ ಚಲನಚಿತ್ರ “ಶ್ರೀ ರಾಮಕೃಷ್ಣ ಪರಮಹಂಸ” ಕಾರ್ಯಕ್ರಮಗಳು ಜರುಗಲಿದೆ ಎಂದು ಸ್ವಾಮಿ ವಿವೇಕ ಚೈತನ್ಯಾನಂದ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
