ಅಡ್ಡೂರು: ನೂಯಿ ಹಾಲು ಉತ್ಪಾದಕರ ಸಂಘಕ್ಕೆ ರಾಜ್ಯ ಸರಕಾರದ ವಿಶೇಷಯೋಜನೆಯಡಿ ಅನುದಾನ ಬಿಡುಗಡೆಗೊಳಿಸಿದ ಜಿ.ಪಂ. ಸದಸ್ಯ ಯು.ಪಿ. ಇಬ್ರಾಹೀಂ ಅವರಿಗೆ ಮಹಿಳಾ ಹಾಲು ಉತ್ಪಾದಕರ ಸಂಘದಿಂದ ಗುರುವಾರ ಇಲ್ಲಿನ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗುರುಪುರ ಗ್ರಾ.ಪಂ.ಅಧ್ಯಕ್ಷೆ ರುಕಿಯಾ, ಗ್ರಾ.ಪಂ. ಅಭುವೃದ್ಧಿ ಅಧಿಕಾರಿ ಅಬುಬಕ್ಕರ್, ಮಹಿಳಾ ಹಾಲು ಉತ್ಪಾದಕರ ಸಂಘದ ಪದ್ಮಿನಿ ಸೇರಿ ಸರ್ವ ಸದಸ್ಯರು ಉಪಸ್ಥಿತರಿದ್ದರು.



