0096dcbccddf222c025f03e705cffb8d

ಕಾಸರಗೋಡು: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ  ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಚೌಕಿ ಕಲ್ಲಂಗೈಯಲ್ಲಿ ಗುರುವಾರ ನಡೆದಿದೆ.

ಮೃತರನ್ನು ಮೂಲತಃ  ಕುಂದಾಪುರದವರಾಗಿದ್ದು, ಭೀಮನಡಿಯ ನಿವಾಸಿಯಾಗಿರುವ ಎಂ.ಪಿ. ಲೂಕಚ್ಚನ್ ( 53) ಹಾಗೂ ವಿಜಯನ್ ( 38) ಎಂದು ಗುರುತಿಸಲಾಗಿದೆ.

ಲೂಕಚ್ಚನ್ ಹಾಗೂ ವಿಜಯನ್ ಸೇರಿ ಬೈಕ್ ನಲ್ಲಿ ಕುಂದಾಪುರದಿಂದ ಕಾಸರಗೋಡಿನ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.

 ಈ ಬಗ್ಗೆ ಕಾಸರಗೋಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *