ಪೊಳಲಿ: ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ 10ನೇ ವರ್ಷದ ಭಜನಾ ಸಂಕೀರ್ತನೆಯನ್ನು ಗುರುವಾರ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ದೀಪಬೆಳಗಿಸಿ ಉದ್ಘಾಟಿಸಿದರು.

ಗುರುವಾರ ಸೂರ್ಯೋದಯದಿಂದ ಮರುದಿನ ಬೆಳಗ್ಗೆ ಸೂರ್ಯೋದಯದವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಯು ನಡೆಯಲಿದೆ. ಈ ಸಂದರ್ಭದಲ್ಲಿ ಶಿವಪ್ರಸಾದ್ ನಾಯಕ್ ಸೊಲ್ತಾಡಿ, ಸತೀಶ್ ಪುಂಚಮೆ, ಸತೀಶ್ ಶೆಟ್ಟಿ ವಾಮದಪದವು, ವಾಮನ ಸಾಲಿಯಾನ್,ರಘುವೀರ್, ವಿಶ್ವನಾಥ ಗುರುಸ್ವಾಮಿ,ವಿಜಯ ಎಸ್, ಎಸ್ ನಿತಿನ್,ಲೋಕೇಶ್ ಎಸ್ ಪಿ, ಪ್ರಸಾಂತ್ಕೋಟ್ಯಾನ್,ಗಣೇಶ್ ಪೂಜಾರಿ,ಶೇಖರ ಕೆ.,ಅಜೇಯ್ ಪೂಜಾರಿ ಮತ್ತಿತರರು ಉಪಸ್ತಿತರಿದ್ದರು.



