ಸಿನೆಮಾ: ಬಿಗ್ ಬಾಸ್ ಸೀಸನ್ 5ನ ವಿನ್ನರ್ ಚಂದನ್ ಶೆಟ್ಟಿ ಹಾಗೂ ಅಗ್ನಿಸಾಕ್ಷಿ ಧಾರವಾಹಿಯ ನಟಿ ಸನ್ನಿಧಿ ಇದೇ ತಿಂಗಳು ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ನು ಈ ನಡುವೆ ಈ ಸುದ್ದಿ ಬಗ್ಗೆ ಖುದ್ದು ಕ್ಲಾರಿಟಿ ಫೇಸ್ಬುಕ್ ಲೈವ್ನಲ್ಲಿ ನೀಡಿರುವ ಸನ್ನಿಧಿ ತಮ್ಮ ಬಗ್ಗೆ ಕೇಳಿ ಬರುತ್ತಿರುವ ರೂಮರ್ಗೆ ನಟಿ ಸನ್ನಿಧಿ ಬೇಸರಗೊಂಡು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಅವರು, ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ತಳ್ಳಿ ಹಾಕಿದ್ದ. “ತಾವು ಹಾಗೂ ಚಂದನ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ಇದೆಲ್ಲ ಸುಳ್ಳಿನ ವಿಷಯ. ಇದಲ್ಲದೇ ನಾನು ಈ ಕುರಿತು ಫೇಸ್ಬುಕ್ನಲ್ಲಿಯೂ ಬರೆದುಕೊಂಡಿಲ್ಲ ಎಂದು ಹೇಳಿರುವ ಅವರು, ನನ್ನದು ಫೇಸ್ಬುಕ್ ಅಕೌಂಟ್ಯಿಲ್ಲ. ಕೇವಲ ಇನ್ಸ್ಟಾಗ್ರಾಂನಲ್ಲಿ ಮಾತ್ರ ಇದ್ದೇನೆ ಅಂತ ಸ್ಪಷ್ಟಪಡಿಸಿದ್ದಾರೆ.
ಇದಲ್ಲದೇ ಅವರು ಇದೇ ವೇಳೆ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ, ನಮಗೂ ಪರ್ಸನಲ್ ಲೈಫ್ ಇದೆ. ಬೇರೆ ವಿಷಯಗಳಿಗೆ ಟ್ರೋಲ್ ಮಾಡಿ, ಆದರೆ, ಇಂತಹ ಮದುವೆ, ನಿಶ್ಚಿತಾರ್ಥದ ಕುರಿತಾಗಿ ತಪ್ಪು ಮಾಹಿತಿಯನ್ನು ಹರಿಯಬಿಡಬೇಡಿ ಎಂದು ಮನವಿ ಮಾಡಿದ್ದಾರೆ ಸನ್ನಿಧಿ ಅಲಿಯಾಸ್ ಅಗ್ನಿಸಾಕ್ಷಿಯ ವೈಷ್ಣವಿ ಗೌಡ.

