ದಿಲ್ಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ಫೆ.5ರಂದು ಅಂತಿಮ ತೀರ್ಪು ಪ್ರಕಟಿಸಲಿದ್ದು, ರಾಜ್ಯಕ್ಕೆ ಜಯ ಸಿಗಲಿದೆಯೇ ಎಂಬ ರೈತರಿಗೆ ಆತಂಕ ತೀವ್ರ ಕಾಡತೊಡಗಿದೆ.
ಈ ವಿವಾದದ ಬಗ್ಗೆ 15 ದಿನಗಳ ಹಿಂದೆ ನಾಲ್ಕು ವಾರದಲ್ಲಿ ಅಂತಿಮ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇಂದು ತೀರ್ಪು ಪ್ರಕಟಿಸುತ್ತಾ ಎಂಬ ಮಾತುಗಳು ಸಾರ್ಜಜನಿಕ ವಲಯದಲ್ಲಿ ಕೇಳಿ ಬಂದಿದೆ.

