ಬಂಟ್ವಾಳ : ಬಡಗಕಜೆಕಾರು-ತೆಂಕ ಕಜೆಕಾರು ಮಾಡ ಕೋಟಿ ಚೆನ್ನಯ ಬಿಲ್ಲವ ಸಂಘ ಮತ್ತು ದೇಯಿ  ಬೈದೆದಿ ಮಹಿಳಾ ಸಂಘ ಇದರ ತೃತೀಯ ವರ್ಷದ ಗುರುಪೂಜೆ ರಘುನಾಥ ಶಾಂತಿ ಅವರ ನೇತೃತ್ವದಲ್ಲಿ ಜ.28ರಂದು ಬಡಗಕಜೆಕಾರು ಮಾಡ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ಜರಗಿತು.
ಪುತ್ತೂರು ಬಿಲ್ಲವ ಸಮಾಜ ಸೇವಾಸಂಘದ ಅಧ್ಯಕ್ಷ ಜಯಂತ ನಡುಬೈಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂದು ವಿಶ್ವಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ತತ್ವಜ್ಞಾನಿ. ಜಾತಿ,ಧರ್ಮ ಮೀರಿ ಬದುಕಿದ ವ್ಯಕ್ತಿ ಅವರು. ಜಾತಿ ಮತ ಭೇದವಿಲ್ಲದೆ ಒಂದಾಗಿ ಕಾರ್ಯನಿರ್ವಹಿಸಿದಾಗ ಸಂಘಟನೆ ಯಶಸ್ವಿಯಾಗುತ್ತದೆ.

ಹೆತ್ತವರು ನೀಡುವ ಸಂಸ್ಕಾರದಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಇತರರಿಗೆ ಸಹಾಯ ಮಾಡುವುದರಿಂದ ನಮ್ಮ ಬದುಕು ಸಾರ್ಥಕವಾಗುತ್ತದೆ. ಸ್ವಾಮಿ ವಿವೇಕಾನಂದ ಮತ್ತು ನಾರಾಯಣ ಗುರುಗಳ ಜೀವನ ನಮಗೆ ಆದರ್ಶವಾಗಬೇಕು ಎಂದು ಹೇಳಿದರು.ಪುತ್ತೂರು ಉಪನ್ಯಾಸಕ, ತರಬೇತುದಾರ ಡಾ| ರಾಜೇಶ್ ಬೆಜ್ಜಂಗಳ ಅವರು ಧಾರ್ಮಿಕ ಉಪನ್ಯಾಸ ನೀಡಿ, ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣ ಗುರುಗಳ ಸಂದೇಶದಂತೆ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ ಉತ್ತಮವಾದ ಸಂಸ್ಕಾರಯುತ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ ಕನೆಜಾಲು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಯುವ ಕವಿ ಸಂತೋಷ್ ನೀರಾರಿ, ಅಂಕ ಗಳಿಸಿದ ಸುರಕ್ಷಾ ಮಿತ್ತೊಟ್ಟು. ಆಕಾಂಕ್ಷಾ ಮಾಡಪಲ್ಕೆ ಅವರನ್ನು ಸಮ್ಮಾನಿಸಲಾಯಿತು. ದೇಜಪ್ಪ ಪೂಜಾರಿ ಕನೆಜಾಲು, ರೇವತಿ ಕೋಮಿನಡ್ಕ ಅವರ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ಧನ ಸಹಾಯ ನೀಡಲಾಯಿತು.
ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ, ಬಡಗಕಜೆಕಾರು ಗ್ರಾ.ಪಂ.ಅಧ್ಯಕ್ಷ ವಜ್ರ ಪೂಜಾರಿ ಬಾರ್ದೊಟ್ಟು, ವಾಮದಪದವು ಬಿಲ್ಲವಸಮಾಜ ಸೇವಾ ಸಂಘದ ಅಧ್ಯಕ್ಷ ಬೂಬ ಪೂಜಾರಿ, ಕಕ್ಯಪದವು ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಗ್ರಾಮದ ಗುರಿಕಾರ ಮತ್ತು ಹಿರಿಯರಾದ ಆನಂದ ಪೂಜಾರಿ ತೆರಂಪಾಡಿ, ಕಜೆಕಾರು ದೇವಸ್ಥಾನದ ಆಡಳಿತ ಮೊಕ್ತೇಸರ ಯಶೋಧರ ಪೂಜಾರಿ, ಮಡವು ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರೇಮಾನಂದ ಉರಿಯೊಟ್ಟು, ಅಧ್ಯಕ್ಷ ಮೋನಪ್ಪ ಪೂಜಾರಿ ಐಂಬಲೋಡಿ, ಗ್ರಾ.ಪಂ.ಸದಸ್ಯರಾದ ಜಯ ಬಂಗೇರ, ಸುರೇಶ್ ಬಾರ್ದೊಟ್ಟು, ಶೋಭಾ, ಸುರೇಖಾ, ಮಾಜಿ ಅಧ್ಯಕ್ಷ ಡೀಕಯ ಬಂಗೇರ,
ಉಪಾಧ್ಯಕ್ಷ ಗುಣಶೇಖರ ಕೊಡಂಗೆ, ಕಾರ್ಯದರ್ಶಿ ಕೃಷ್ಣಪ್ಪ ಪುಜಾರಿ ಪಾರೊಟ್ಟು,ಕೋಶಾ„ಕಾರಿ ರಾಮಚಂದ್ರ ಪೂಜಾರಿ ಕÀಂರ್ಬಡ್ಕ,ಮಹಿಳಾ ಮಂಡಲದ ಅಧ್ಯಕ್ಷೆ ಕೋಕಿಲ ಪಾಂಡವರಕಲ್ಲು ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಗೌರವ ಸಲಹೆಗಾರ ಮೋನಪ್ಪ ಪೂಜಾರಿ ಕಂಡೆತ್ಯಾರು ಸ್ವಾಗತಿಸಿ, ಪ್ರಸ್ತಾವಿಸಿದರು. ಸಂಘದ ಗೌರವ ಸಲಹೆಗಾರ ವಿಶ್ವನಾಥ ಪೂಜಾರಿ ವರದಿ ವಾಚಿಸಿದರು. ಕೋಕಿಲ ವಂದಿಸಿದರು. ದೇವದಾಸ್ ಕಜೆಕಾರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *