ಕೈಕಂಬ: ಕೃಷಿ ಈಗ ಲಾಭದಾಯಕವಲ್ಲ, ಅನಿವಾರ್ಯವಾಗಿ ಅವಲಂಬನೆಯಾಗಿದೆ ಎನ್ನಲಾಗುತ್ತಿದ್ದರೂ, `ಅವೈಜ್ಞಾನಿಕ’ ಮಾದರಿಯಿಂದ ಇಂದು ಕೃಷಿ ದೂರವಾಗಿದೆ ಎಂದು ಯಾರೂ ಹೇಳುತ್ತಿಲ್ಲ. ಉತ್ಪಾದನೆಗಿಂತಲೂ ಉತ್ಪಾದಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ದ ಕ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪ್ರೊ. ಡಾ. ಶಿವಕುಮಾರ್ ಮಗದ ಹೇಳಿದರು. ಅವರು ಶನಿವಾರ ಗಂಜಿಮಠದ ಒಡ್ಡೂರು ಫಾರ್ಮಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ `ಕೃಷಿ ಸಂಗಮ-2018’ದಲ್ಲಿ(ಕೃಷಿ ಪರಿವಾರದ ಸಮಾಗಮ) ದಿಕ್ಸೂಚಿ ಭಾಷಣಮಾಡಿ ಮಾತನಾಡುತ್ತದ್ದರು.

3 vp krisi 4

ಕಡಿಮೆ ಪ್ರದೇಶದಲ್ಲಿ ಹೆಚ್ಚು ಇಳುವರಿ ಸಾಧ್ಯ ಮತ್ತು ಇದಕ್ಕೆ ಕೃಷಿಯಲ್ಲಿ ಅರ್ಥಶಾಸ್ತ್ರದ ನೆರವು ಪಡೆದುಕೊಳ್ಳಬೇಕು. ಲೆಕ್ಕಾಚಾರ ತಪ್ಪಿದರೆ ಕೃಷಿಯಲ್ಲಿ ಯಶಸ್ಸು ಅಸಾಧ್ಯ. ವಿದೇಶಿ ರೈತರಂತೆ ಬುದ್ಧಿವಂತಿಕೆಯಿಂದ ಮಾರುಕಟ್ಟೆ ಸೃಷ್ಟಿಸಬೇಕು ಎಂದರು.

ಈಗ ಯುದ್ಧ, ರೋಗ-ರುಜಿನದ ಭೀತಿ ಎಂಬುದಿಲ್ಲ. ಈಗ ಜಗತ್ತಿನಲ್ಲಿರುವುದು ಈಗ ಹಸಿವು ಮತ್ತು ಮಾನವೀಯ ಮೌಲ್ಯಗಳ ಭೀತಿ. ಇದರ ನಿವಾರಣೆಯ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. `ರೈತ ದೇವೋ ಭವಃ’ ಎನ್ನಬೇಕಾದ ಕಾಲವಿದು. ರೈತ ಈ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತಿದ್ದರೂ ಈಗ ಆತನ ಬೆನ್ನು ಮುರಿದಿದೆ ಎಂದವರು ಹೇಳಿದರು.

3 vp krisi 5
“ಕೃಷಿಯಿಂದ ಅಂತರ್ಜಲ ಕುಸಿತ ತಪ್ಪುತ್ತದೆ. ಈಗ ಎಲ್ಲೆಡೆ ಕೃಷಿ ಭೂಮಿ ಬಂಜರಾಗಿದೆ. ಪ್ರಾಯಶಃ ದ ಕ ಜಿಲ್ಲೆಯಲ್ಲಿ ಅಂತರ್ಜಲ ಕುಸಿತಕ್ಕೆ ಇದು ಕಾರಣವಿರಬಹುದು” ಎಂದು ಪ್ರೊ. ಡಾ. ಶಿವಕುಮಾರ್ ಮಗದ ನುಡಿದರು.

ಬಿಜೆಪಿ ಮುಖಂಡ ರಾಜೇಶ್ ನಾಯಕ್ ಮಾಲಕತ್ವದ ಒಡ್ಡೂರು ಫಾರ್ಮ್ ಮತ್ತು ಅರುಣ್ಯ ಫೌಂಡೇಶನ್(ರಿ) ಮಂಗಳೂರು ಜಂಟಿಯಾಗಿ ಕೃಷಿ ಸಂಗಮ ಆಯೋಜಿಸಿದೆ.

3 vp krisi 6

ಕೃಷಿ ಸಂಗಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಡ್ಡೂರು ಫಾರ್ಮಿನ ನೇತಾರ ರಾಜೇಶ್ ನಾಯ್ಕ್ ಅಧ್ಯಕ್ಷೀಯ ಭಾಷಣ ಮಾಡುತ್ತ, ನಾನು ಕೃಷಿ ಆಧರಿತ ಕುಟುಂಬದಿಂದ ಬಂದವ. ನನ್ನ ಹಿರಿಯರು ಕೃಷಿಕರಾದ್ದರೂ, ನನಗೆ ಕೃಷಿ ಬೇಡ ಎಂದು ಹೇಳಿದ್ದರು. ಆದರೆ ನಾನು ಕೃಷಿಯಲ್ಲೇ ಆಸಕ್ತಿ ಬೆಳೆಸಿಕೊಂಡು ಇಂದು ಈ ಮಟ್ಟಕ್ಕೆ ಏರಿದ್ದೇನೆ. ಹಿಂದೆ ಬಂಜರಾಗಿದ್ದ ಈ ಗುಡ್ಡಗಾಡು ಇಂದು ಹಸಿರುದಾಣವಾಗಿ ಕಂಗೊಳಿಸುತ್ತಿದೆ. ಶ್ರಮ ವಹಿಸಿದರೆ ಇಂದು ನಾನು, ನಾಳೆ ನೀವೂ ಇಂತಹದೊಂದು ಸಾಧನೆ ಮಾಡಬಹುದು. ಅದಕ್ಕೆ ಹೆಚ್ಚಿನ ಶ್ರದ್ಧೆ, ಒಲವು ಅವಶ್ಯ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕೂಲಿ ಕಾರ್ಮಿಕರ ಸಮಸ್ಯೆಯಿಂದ ಈಗ ಜಿಲ್ಲೆಯಲ್ಲಿ ಭತ್ತದ ಕೃಷಿ ಕಡಿಮೆಯಾಗಿದೆ. ಇದಕ್ಕೆ ಪರ್ಯಾಯವಾಗಿ ತೆಂಗು-ಕಂಗು, ರಬ್ಬರ್ ಹಾಗೂ ಇತರ ಉಪ-ಕೃಷಿ ಮಾಡಲಾಗುತ್ತಿದೆ. ಕೃಷಿಗೆ ಬೆನ್ನು ತೋರಿಸುವ ಯುವಜನರು ಹಳ್ಳಿಯಿಂದ ಪಟ್ಟಣದತ್ತ ಹೋಗುತ್ತಿದ್ದಾರೆ. ಕೃಷಿ ಗದ್ದೆ ಬಂಜರಾಗಿದೆ. ಜಿಲ್ಲೆಯಲ್ಲಿ ಈಗ ಹೈನುಗಾರಿಕೆ ಲಾಭದಾಯಕವಾಗಿದೆ ಎಂದು ಕೃಷಿಯಲ್ಲಿ ಸಾಧನೆ ಮಾಡಿರುವ ಪದ್ಮನಾಭ ಕೊಟ್ಟಾರಿ ತಿಳಿಸಿದರು.

ಬೆಳ್ತಂಗಡಿಯ `ಭತ್ತದ ತಳಿ ತಪಸ್ವಿ’ ಆರ್ ಕೆ ದೇವರಾವ್ ಕೃಷಿ ಸಂಗಮ ಉದ್ಘಾಟಿಸಿದರು. ಇವರು ಭತ್ತದ ಕೃಷಿಯಲ್ಲಿ ಸಾಕಷ್ಟು ಕೆಲಸ ಮಾಡಿದ 85 ವರ್ಷದ ಪ್ರಗತಿಪರ ಕೃಷಿಕ. ಪಿಯುಸಿಗೆ ಕಲಿಕೆ ನಿಲ್ಲಿಸಿದ ಇವರು ನಂತರದಲ್ಲಿ ಇಂದಿನವರೆಗೂ ಭತ್ತದ ಕೃಷಿಯಲ್ಲಿ ತೊಡಗಿರುವ ಹಾಗೂ ಭತ್ತದ ಹೊಸಹೊಸ ತಳಿ ಆವಿಷ್ಕಾರ ಮಾಡಿದ `ಹಳ್ಳಿ ಕೃಷಿ ವಿಜ್ಞಾನಿ’. ಹಿಂದೆ ಇವರಲ್ಲಿ ಆರೇಳು ಭತ್ತದ ತಳಿ ಇದ್ದರೆ ಈಗ ಇವರಲ್ಲಿ 120 ತಳಿಗಳಿವೆ. “ಕಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಬೆಳ್ತಂಗಡಿಯಲ್ಲಿ ಪ್ರಾಣಿಗಳ ಉಪಟಳದಿಂದ ಕೃಷಿ ದುಸ್ತರವಾಗಿದ್ದರೂ ನಾನು ಧೈರ್ಯಗುಂದದೆ ಕೃಷಿಯಲ್ಲಿ ಮುಂದುವರಿದಿದ್ದೇನೆ. ನನಗೆ ಈವರೆಗೆ ಭತ್ತದ ಕೃಷಿ ಕೀರ್ತಿ ತಂದು ಕೊಟ್ಟಿದೆ. ಯುವ ಪೀಳಿಗೆಯು ಇತರ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿದರೂ ಕೃಷಿ ಮಾತ್ರ ಮರೆಯಬೇಡಿ. ಕೃಷಿಯಿಂದ ಒತ್ತಡವಿಲ್ಲದ ಒಂದು ಉತ್ತಮ ಜೀವನ ಸಾಧ್ಯವಿದೆ. ಹಡಿಲ್ ಬಿದ್ದಿರುವ ಕೃಷಿ ಭೂಮಿ ಮತ್ತೆ ಹಸಿರಾಗಲಿ” ಎಂದು ಆಶಿಸಿದರು.

3 vp krisi 7
ರಾಜೇಶ್ ನಾಯ್ಕ್ ಎಲ್ಲರಿಗೂ ಮಾದರಿ ಕೃಷಿಕರಾಗಿದ್ದಾರೆ. ಭಾರತದ ಪುನರುತ್ಥಾನಕ್ಕೆ ಇಟ್ಟ ಹೆಜ್ಜೆ ಈ ಕೃಷಿ ಸಂಗಮ. ಇವರು ಪಾಲಿಸಿ ಮೇಕರಾದರೆ ಕರ್ನಾಟಕದಲ್ಲಿನ ಕೃಷಿ ಚಿತ್ರಣ ಬದಲಾಗಬಹುದು ಎಂದ `ಕ್ಯಾಂಪ್ಕೋ’ ಪುತ್ತೂರು ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಹೈನುಗಾರಿಕೆಯಲ್ಲಿ ಭಾರತ ಸೂಪರ್ ಪವರ್‍ನತ್ತ ಸಾಗುತ್ತಿದೆ. ಹಿಂದೆ ವಿದೇಶಿಗರಿಂದ ಹೊಟ್ಟೆಗಿಲ್ಲದ, ಭಿಕ್ಷುಕರ ರಾಷ್ಟ್ರವೆಂದು ಅಗೌರವಕ್ಕೊಳಗಾಗಿದ್ದ ಭಾರತ, ಇಂದು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ ಎಂದರು.

ಬ್ಯಾಂಕುಗಳಿಂದ ಸಾಲ ಪಡೆಯುವ ರೈತರು ಸಕಾಲಕ್ಕೆ ಸಾಲ ಮರು ಪಾವತಿ ಮಾಡಿದರೂ, ಉಳ್ಳವರು ಮಾತ್ರ ಮೀನಮೇಷ ಎಣಿಸುತ್ತಿದ್ದರೆ. ಬ್ಯಾಂಕುಗಳು ಠೇವಣಿಯ ಮೇಲೆ ಸಾಲ ನೀಡುತ್ತದೆ. ಇದನ್ನು ಸದುಪಯೋಗಪಡಿಸಿದಲ್ಲಿ ಬ್ಯಾಂಕಿಗೂ ಕೃಷಿಕರಿಗೂ ಒಳಿತಿದೆ ಎಂದು ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಬಾಲಚಂದ್ರ ನುಡಿದರು.* ಕೃಷಿ ಆ್ಯಪ್ ಬಿಡುಗಡೆ

3 vp krisi2

ಕೃಷಿ ಸಂಗಮದಲ್ಲಿ ಕೃಷಿಗೆ ಸಂಬಂಧಿಸಿದ ವಿಶೇಷ ಆ್ಯಪ್ `ಫಾರ್ಮ್ ಸರ್ಜ್’ನ್ನು ದ ಕ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಬಿಡುಗಡೆಗೊಳಿಸಿದರು. ಇದು ಲಾಭದಾಯಕ ಕೃಷಿಗೆ ಮೊಬೈಲ್ ಆಧರಿತ ಡಿಜಿಟಲ್ ತಂತ್ರಜ್ಞಾನವಾಗಿದೆ.
ವೇದಿಕೆಯಲ್ಲಿ ಕೃಷಿ ವಿಜಾÐನಿ ವಿನಾಯಕ ಹೆಗ್ಡೆ, ಕರ್ನಾಟಕ ರೈತ ಸಂಘದ ಪ್ರತಿನಿಧಿ ಸುಬ್ರಹ್ಮಣ್ಯ, ಶ್ರೀನಿವಾಸ ಪೆಜತ್ತಾಯ ಇದ್ದರು.

ಶಾಲಾ ಕಾಲೇಜು ಮಕ್ಕಳಿಗೆ ಕೃಷಿ ಸಂಬಂಧಿತ ಸ್ಪರ್ಧೆಗಳು ಹಾಗೂ ಸಾರ್ವಜನಿಕ ಕೃಷಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.

By suddi9

Leave a Reply

Your email address will not be published. Required fields are marked *