ಬಂಟ್ವಾಳ: ಚುನಾವಣೆ ಹತ್ತಿರ ಬರುತ್ತಿದೆ, ರಾಜಕೀಯ ಪಕ್ಷಗಳು ಜನರತ್ತ ಮತ್ತೆ ಆಶ್ವಾಸನೆ, ಭರವಸೆಗಳನ್ನು ಹೊತ್ತು ಬರುತ್ತಿದ್ದಾರೆ. ಆದರೆ ನಮ್ಮೂರಿನ ನೈಜ ಸಮಸ್ಯೆಗಳೇನು..ಆ ಬಗ್ಗೆ ನಿಮ್ಮ ಕಾಳಜಿ ಏನಿದೆ ಎಂದು ರಾಜಕೀಯ ಪಕ್ಷಗಳನ್ನು ಪ್ರಶ್ನಿಸಲು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಚುನಾವಣೆ-ಅಹವಾಲು ಎಂಬ ವೇದಿಕೆಯಡಿ ಮತದಾರರಿಗೆ ಅವಕಾಶ ಒದಗಿಸುತ್ತಿದೆ.
ಫೆಬ್ರವರಿಯಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕ್ಷೇತ್ರದ ಜನತೆಯಿಂದ ನೈಜ ಬೇಡಿಕೆಗಳನ್ನು ಆಹ್ವಾನಿಸುತ್ತಿದ್ದೇವೆ. ತಾವು ಕಳುಹಿಸುವ ಅಹವಾಲುಗಳನ್ನು ರಾಜಕೀಯ ಪಕ್ಷಗಳ ಗಮನಕ್ಕೆ ತರುವುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ತಮ್ಮ ಊರಿನ ಅಗತ್ಯದ ಬೇಡಿಕೆಯನ್ನು, ಅದರ ಹಿನ್ನೆಲೆಯನ್ನು ನಮ್ಮ ವಿಳಾಸಕ್ಕೆ ಫೆಬ್ರವರಿ 10ರೊಳಗೆ ಪತ್ರ ಅಥವಾ ಈಮೇಲ್ ಮೂಲಕ ಕಳುಹಿಸಿಕೊಡಿ.
ನಮ್ಮ ವಿಳಾಸ ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು, ಪ್ರೆಸ್ ಕ್ಲಬ್ ಬಿ.ಸಿ.ರೋಡು.574219 .
Email : bantwalapressclub@gmail.com
