ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು 203 ರನ್‌ಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ಮೂಲಕ ಭಾರತ ತಂಡ ಮತ್ತೆ ಫೈನಲ್ ಪ್ರವೇಶ ಮಾಡಿದೆ.
ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಶುಭಮ್ ಗಿಲ್ ಅವರ ಅಜೇಯ 102 ರನ್ (94 ಎಸೆತ,7 ಬೌ)ಗಳ ನೆರವಿನಿಂದ 9 ವಿಕೆಟ್‌ಗಳ ನಷ್ಟಕ್ಕೆ ಭಾರತ ತಂಡವು 272 ರನ್‌ಗಳ ಸವಾಲಿನ ಮೊತ್ತ ಸೇರಿಸಿತ್ತು.
ಪಾಕ್ ಪರ ವೇಗಿಗಳಾದ ಮುಹಮ್ಮದ್ ಮೂಸಾ ಮತ್ತು ಅರ್ಶದ್ ಇಕ್ಬಾಲ್ ಕ್ರಮವಾಗಿ 4 ಮತ್ತು 3 ವಿಕೆಟ್ ವಿಕೆಟ್ ಉಡಾಯಿಸಿದರು.
ಬಳಿಕ ಈ ಮೊತ್ತವನ್ನು ಬೆನ್ನಟ್ಟುವಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ಕೇವಲ 69 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ಸೋಲಿನ ಅಂತರ 203 ರನ್‌ಗಳು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ಇಶಾನ್ ಪಾರಲ್ 17ಕ್ಕೆ 4, ಶಿವ ಸಿಂಗ್ ಮತ್ತು ಅಂಕುಲ್ ರಾಯ್ ತಲಾ 2 ವಿಕೆಟ್ ಪಡೆದರು.

