ಬಂಟ್ವಾಳ:ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ಇಲ್ಲಿನ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಇವರು ಬೆಂಗಳೂರಿನಲ್ಲಿ ಸೋಮವಾರ ನಡೆದ 14ರ ವಯೋಮಾನ ವಿಭಾಗದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಕ್ರ ಎಸೆತ ಪ್ರಥಮ ಮತ್ತು ಗುಂಡೆಸೆತ ದ್ವಿತೀಯ ಸ್ಥಾನ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

11btl-Gunashriಈಕೆ ಸಂಗಬೆಟ್ಟು ಸಮೀಪದ ಮಾಲ್ದಾಡು ನಿವಾಸಿ ಪ್ರಗತಿಪರ ಕೃಷಿಕ ರವೀಂದ್ರ ಜೈನ್ ಮತ್ತು ಪದ್ಮಶ್ರೀ ಜೈನ್ ಇವರ ಪುತ್ರಿಯಾಗಿದ್ದು, ಶಾಲೆ ಮಾತ್ರವಲ್ಲದೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಬಾರಿ ಚಕ್ರ ಎಸೆತದಲ್ಲಿ ಈ ಹಿಂದಿನ ಎಲ್ಲಾ ದಾಖಲೆ ಮುರಿದಿರುವ ಈಕೆ ಇದೇ ತಿಂಗಳ ಕೊನೆಯಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *