ಬಂಟ್ವಾಳ: ತಾಲ್ಲೂಕಿನ ಪ್ರಸಿದ್ಧ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಾಷರ್ಿಕ ಬ್ರಹ್ಮ ಬೈದರ್ಕಳ ಜಾತ್ರೆ ಇದೇ 30ರಂದು ರಾತ್ರಿ ನಡೆಯಲಿದೆ.

ಅಂದು ರಾತ್ರಿ ಗಂಟೆ 8.30ಕ್ಕೆ ಬೈದರ್ಕಳರು ಒಲಿಮರೆಯಿಂದ ಹೊರಟು, 11ಗಂಟೆಗೆ ಬಾಕಿಮಾರು ಗದ್ದೆಗೆ ಇಳಿದು 12ಗಂಟೆಗೆ ಕೊಡಮಣಿತ್ತಾಯಿ ಬೈದರ್ಕಳ ಕಡಸಾಲೆ ಬಲಿ ಮತ್ತು ಸುರ್ಯ ಹಾಕಿಕೊಳ್ಳುವುದು. ತಡರಾತ್ರಿ 2ಗಂಟೆಗೆ ಬ್ರಹ್ಮರ ಬಲಿ ನಡೆದು ಮುಂಜಾನೆ 4ಗಂಟೆಗೆ ಬೈದರ್ಕಳ ಪಾತ್ರಿಗಳು ದರ್ಶನ ಬಳಿಕ ಸುರ್ಯ ಹಾಕಿಕೊಳ್ಳುವುದು ಹಾಗೂ 5ಗಂಟೆಗೆ ಬೈದರ್ಕಳರು ಗರಡಿಗೆ ಮರಳಿದ ಬಳಿಕ ಮಾಯಂದಾಲೆ ದೇವಿ ಉತ್ಸವ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *