ಬಂಟ್ವಾಳ : ರಾಯರಚಾವಡಿ ಬಂಟ್ವಾಳ ಬಡ್ಡಕಟ್ಟೆ ಶ್ರೀ ಪಂಜುರ್ಲಿ-ಪಿಲಿಚಾಮುಂಡಿ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದ ವಾರ್ಷಿಕ ನೇಮೋತ್ಸವ ಜ. 26, 27ರಂದು ನಡೆಯಿತು. ಜ. 26ರಂದು ಪೂರ್ವಾಹ್ನ 8ಗಂಟೆಗೆ ನೇಮೋತ್ಸವ ಮುಹೂರ್ತ, ಪೂಜೆ, ತಂಬಿಲ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ 4ಗಂಟೆಗೆ ಪ್ರಧಾನ ಹೋಮ, ರಂಗಪೂಜೆ, ಭಂಡಾರ ಬರುವುದು, ದೈವಗಳ ನೇಮ , ವಲಸರಿ ಸೇವೆ ನಡೆಯಿತು.
ಜ. 27ರಂದು ಬೆಳಗ್ಗೆ ಕಟ್ಟೆಪೂಜೆ, ಪ್ರಸಾದ ವಿತರಣೆ, ಸಂಜೆ 5.30ಕ್ಕೆ ಮಹತ್ವವಾಗಿ ಶ್ರೀ ಪಂಜುರ್ಲಿ ದೈವಕ್ಕೆ ಎಣ್ಣೆ ಬೂಳ್ಯ, ಬಳಿಕ ದೈವದ ನೇಮೋತ್ಸವ ಸವಿರಾರು ಭಕ್ತರ ಪಾಲ್ಗೋಳ್ಳುವಿಕೆಯಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಸಮಿತಿ ಅಧ್ಯಕ್ಷ ಬಿ. ಯೋಗೀಶ್ ಸಪಲ್ಯ . ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಉದಯ ಕುಮಾರ್, ದಿನೇಶ್ ಭಂಡಾರಿ, ರಾಮ್ ದಾಸ್ ಬಂಟ್ವಾಳ್, ಜಿ,ಆನಂದ, ಪ್ರವೀಣ್ ಬಿ. ಬಾಸು ಪೂಜಾರಿ, ವೆಂಕಪ್ಪ ಪೂಜಾರಿ ಮತ್ತಿರರು ದೈವದ ದರ್ಶನ ಪಡೆದರು.
