flames-fire-2

ಪ್ರತಾಪಗಢ: ದಲಿತ ಬಾಲಕಿ ಮೇಲೆ ಇಬ್ಬರು ಸೀಮೆ ಎಣ್ಣೆ ಸುರಿದು ಸಜೀವ ದಹನ ಮಾಡಿರುವ ಹೇಯ ಕೃತ್ಯ ಉತ್ತರ ಪ್ರದೇಶದ ಲಾಲ್‌ಗಂಜ್‌ನಲ್ಲಿ ನಡೆದಿದೆ.

ಮೃತ ದಲಿತ ಬಾಲಕಿಯನ್ನು ಮಿಥಾಯಿಲಾಲ್ ಅವರ ಪುತ್ರಿ ಅಂಜು(19) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದೀಪ್ ಹಾಗೂ ಆತನ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿಥಾಯಿಲಾಲ್ ಎನ್ನುವವರ ಮನೆಗೆ ದೀಪ್ ಹಾಗೂ ಆತನ ತಂದೆ ನುಗ್ಗಿದ್ದು, ಈ ವೇಳೆ ಮನೆಯಲ್ಲಿ ಅವರ ಮಗಳು ಅಂಜು ಒಬ್ಬಂಟಿಯಾಗಿದ್ದುದನ್ನ ಕಂಡು  ಆರೋಪಿಗಳು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ್ದಾರೆ. ಬಳಿಕ ಆಕೆಯನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *