ee2ce3658586e58f87126a9ce4e88d19

ಬೆಂಗಳೂರ: ರಾಜ್ಯ ಸರ್ಕಾರ ಶನಿವಾರ ನಾಲ್ಕು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಎಸ್ಪಿಯಾಗಿ ರವಿಕಾಂತೇಗೌಡ ಅವರನ್ನು ನೇಮಿಸಲಾಗಿದೆ.

ಕಳೆದ ಹಲವು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಉಂಟಾಗಿ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯವೈಖರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಇಲ್ಲಿನ ಎಸ್ಪಿಯಾಗಿದ್ದ ಸುಧೀಂದ್ರಕುಮಾರ್‍ರೆಡ್ಡಿಯನ್ನು ವರ್ಗಾವಣೆಗೊಳಿಸಲಾಗಿದೆ.

ರವಿಕಾಂತೇಗೌಡ ಅರು ಈ ಹಿಂದೆ ಬೆಳಗಾವಿಯಲ್ಲಿ ಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

 

ವರ್ಗವಣೆಗೊಂಡ ಅಧಿಕಾರಿಗಳು

ರವೀಕಾಂತ್‍ಗೌಡ- ಎಸ್.ಪಿ. ದಕ್ಷಣಕನ್ನಡ
ಸುಧೀಂದ್ರಕುಮಾರ್‍ರೆಡ್ಡಿ- ಎಸ್.ಪಿ ಬೆಳಗಾವಿ
ಕುಲ್‍ದೀಪ್‍ಕುಮಾರ್‍ಜೈನ್- ಎಸ್‍ಪಿ ವಿಜಯಪುರ
ಬಿ.ಎಂ. ಲಕ್ಷ್ಮೀ ಪ್ರಸಾದ್- ಎಸ್‍ಪಿ ನಕ್ಸಲ್ ನಿಗ್ರಹದಳ(ಎಎನ್‍ಎಪ್)

 

By Suddi9

Leave a Reply

Your email address will not be published. Required fields are marked *