ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಲೊರೆಟ್ಟೊ-ಕುತ್ತಾರ್‍ಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಪರಿಸರ ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ.ಸದಸ್ಯೆ ಮಲ್ಲಿಕಾ ಶೆಟ್ಟಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಅಕ್ರಮ-ಸಕ್ರಮ ಸದಸ್ಯೆ ಫ್ಲೋಸಿ ಡಿಸೋಜ, ಮಾಜಿ ತಾ.ಪಂ.ಸದಸ್ಯ ಎಫ್ರೆಂ ಸಿಕ್ವೇರಾ, ಗ್ರಾ.ಪಂ.ಸದಸ್ಯ ರಿಚಾರ್ಡ್ ಮೆನೇಜಸ್, ಕೆಥೋಲಿಕ್ ಸಭಾ ವಲಯಾಧ್ಯಕ್ಷ ಸ್ಟೇನ್ಲಿ ಲೋಬೋ, ರಾಬರ್ಟ್ ಡಿಸೋಜ, ಇಂಜಿನಿಯರ್ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

