Jai-Ram-Thakur

ಶಿಮ್ಲಾ: ಇಂದು ನಡೆದ ಹಿಮಾಚಲ ಪ್ರದೇಶದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಚಿವ ಜೈರಾಮ್ ಠಾಕೂರು ಅವರನ್ನು ಇಲ್ಲಿನ ರಾಜ್ಯ ಮೂಂಖ್ಯಮಂತ್ರಿಯಾಗಿ ಆಯ್ಕೆಗೊಳಿಸಲಾಗಿದೆ.

ಈ ವೇಳೆ ನಡೆದ ಸಭೆಯಲ್ಲಿ ಮಾಜಿ ಮುಖ್ಯಂತ್ರಿ ಪ್ರೇಮ್ ಕುಮಾರ್ ಅವರು ಠಾಕೂರ್ ಅವರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಸೂಚಿಸಿದರು. ಶಾಂತ ಕುಮಾರ್, ಜೆ.ಪಿ. ನಡ್ಡಾ ಅನುಮೋದಿಸಿದರು.

ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರು ಅವರು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಡಿ.ಸೆ.25ರಂದು ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳುವ ನಿರೀಕ್ಷೆಯಿದೆ.

By suddi9

Leave a Reply

Your email address will not be published. Required fields are marked *