858585

ಶಿಮ್ಲಾ: ಹಿಮಾಚಲ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರಸ್ ಗೆ ಸೋಲಾದ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ ಪಾಳೆಯಲ್ಲಿ ಅಭ್ಯರ್ಥಿಗಳ ಪೈಪೋಟಿ ದಿನೇ ದಿನೇ ಹೆಚ್ಚಾಗಿದ್ದು, ಕೊನೆಗೂ ಅಭ್ಯರ್ಥಿಯೋರ್ವರ ಹೆಸರು ಇದೀಗಾ ಕೇಳಿ ಬಂದಿದೆ.

ರಾಜ್ಯದಲ್ಲಿ ಐದು ಬಾರಿ ಶಾಸಕ ಸ್ಥಾನದಲ್ಲಿದ್ದ ಹಿರಿಯ ನಾಯಕ ಜಯರಾಮ್ ಠಾಕೂರ್ ರಾಜ್ಯದ ನೂತನ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದ್ದು, ಶುಕ್ರವಾರ ಅಧಿಕೃತ ಘೋಷಣೆ ಪ್ರಕಟಗೊಳ್ಳಲಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಯರಾಮ್ ಅವರು, ಇ ಸೆರಾಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ  ಜಯ ಸಾಧಿಸಿದ್ದರು.

ಕೇಂದ್ರ ನಗರಾಭಿವೃದ್ಧಿ ಸಚಿವ ನವರಿಂದ್ ಸಿಂಗ್ ಥೋರಾಮ್, ಕೇಂದ್ರ ರಕ್ಷಣಾ ಸಚಿವೆ ವಿಮಲಾ ಅವರಿದ್ದ ಇಬ್ಬರ ಸದಸ್ಯರ ವಿಕ್ಷಣಾ ತಂಡ ಗುರುವಾರ ಶಿಮ್ಲಾಕ್ಕೆ ಭೇಟಿ ನೀಡಿ, ಕಮಲ ನಾಯಕರೊಂದಿಗೆ ಚರ್ಚೆ ನಡೆಸಿದೆ. ಅಲ್ಲದೆ, ಠಾಕೂಟ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು, ಅಧಿಕೃತ ಘೋಷಣೆ ಶುಕ್ರವಾರ ತಿಳಿಸಲಿದೆ ಎಂದು ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *