ಮುಂಬೈ: ಸ್ವದೇಶದಲ್ಲಿ ಮೊದಲ ಬಾರಿಗೆ ನಿರ್ಮಿಸಿರುವ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಎನ್ಎಸ್ ಕಲ್ವರಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮುಂಬೈನ ಮಜಗಾಂವ್ ಹಡಗುಕಟ್ಟೆ(ಎಂಡಿಎಲ್)ಯಲ್ಲಿ ಇದೇ ಮೊದಲ ಬಾರಿನಿರ್ಮಿಸಲಾದ ಕಲ್ವರಿಯನ್ನು ದೇಶಕ್ಕೆ ಸಮರ್ಪಿಸಿದರು.
ಐಎನ್ಎಸ್ ಕಲ್ವರಿ ಜಲಾಂತರ್ಗಾಮಿ ನೌಕೆಯನ್ನು ಫ್ರೆಂಚ್ ನಾವೆಲ್ ಡಿಫೆನ್ಸ್ ಆ್ಯಂಡ್ ಎನರ್ಜಿ ಕಂಪೆನಿ ಡಿಸಿಎನ್ಎಸ್ ವಿನ್ಯಾಸಗೊಳಿಸಿದ್ದು, ಮಝಗೋನ್ ಡಾಕ್ ಲಿಮಿಟೆಡ್ ನೌಕೆಯನ್ನು ನಿರ್ಮಾಣ ಮಾಡಿದೆ.
