court-hammerಎರ್ನಾಕುಲಂ: ಕೇರಳದ ಕಾನೂನು ವಿದ್ಯಾರ್ಥಿನಿ ಜಿಶಾ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಅಮೀರುಲ್ ಇಸ್ಲಾಂಗೆ ಇಲ್ಲಿನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಎರ್ನಾಕುಲಂ ಪ್ರಧಾನ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎನ್. ಅನಿಲ್ ಕುಮಾರ್ ಅವರು ಅಮೀರುಲ್ ಇಸ್ಲಾಂ ಅಪರಾಧಿ ಎಂದು ಘೋಷಿಸಿದ್ದು, ಅದರಂತೆ ಇಂದು ಶಿಕ್ಷೆಯ ಪ್ರಮಾಣ ತಿಳಿಸಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.

ಅಸ್ಸಾಂ ಮೂಲದ ವಲಸೆ ಕಾರ್ಮಿಕ ಅಮೀರುಲ್ ಇಸ್ಲಾಂ 2016ರ ಏ. 28ರಂದು ಕಾನೂನು ವಿದ್ಯಾರ್ಥಿ 30 ವರ್ಷದ ದಲಿತ ಮಹಿಳೆ ಜಿಶಾಳ ಮೇಲೆ ಅತ್ಯಾಚಾರ ನಡೆಸಿ ಬಳಿಕ ಭೀಕರವಾಗಿ  ಹತ್ಯೆ ಮಾಡಿದ್ದ.

ಜಿಶಾ ಮೃತದೇಹ ಆಕೆಯ ಮನೆಯ ಕೊಠಡಿಯಲ್ಲಿ ಪತ್ತೆಯಾಗಿದ್ದು, ಜಿಶಾ ದೇಹದ ಮೇಲೆ 38 ಗಾಯದ ಗುರುತುಗಳು ಪತ್ತೆಯಾವೆ.

ಈ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು.

By suddi9

Leave a Reply

Your email address will not be published. Required fields are marked *