ವಿಟ್ಲ: ಜೀರ್ಣೋದ್ಧಾರಗೊಳ್ಳುತ್ತಿರುವ ವಿಟ್ಲ ಶ್ರೀ ಜಠಾಧಾರಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವು ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ನಡೆಯಿತು. ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು, ಕೃಷ್ಣಯ್ಯ ಕೆ ವಿಟ್ಲ ಅರಮನೆ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ಸ ಶೆಣೈ, ಸದಸ್ಯ ರವಿಪ್ರಕಾಶ್, ಬಾಬು ಕೊಪ್ಪಳ, ಪ್ರಭಾಕರ ಶೆಟ್ಟಿ ದಂಬೆಕಾನ, ಶ್ರೀಕಂಠ ವಿಟ್ಲ ಅರಮನೆ ಮೊದಲಾದವರು ಉಪಸ್ಥಿತರಿದ್ದರು.
