ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ 38 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕಿಯಾಗಿದ್ದು ನಿವೃತ್ತಿಯಾದ ಕಮಲಾವತಿ ಯವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ಆಡಳಿತ ಮಂಡಳಿ ವತಿಯಿಂದ ಶಾಲಾ ಸಭಾ ಭವನದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಕೋಶಾಧಿಕಾರಿ ನಿತ್ಯಾನಂದ ನಾಯಕ್ ವಹಿಸಿದ್ದರು.A

ಸಂಚಾಲಕ ಎಲ್ ಎನ್ ಕೂಡೂರು ಮತ್ತು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ನಿವೃತ್ತ ಪ್ರಾಂಶುಪಾಲ ರಾಧಾಕೃಷ್ಣ ಭಟ್, ನಿವೃತ್ತ ಉಪನ್ಯಾಸಕ ವಿಶ್ವೇಶ್ವರ ಭಟ್, ನಿವೃತ್ತ ಶಿಕ್ಷಕಿ ಪರಮೇಶ್ವರಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಸ್ವಾಗತಿಸಿದರು. ಶಿಕ್ಷಕ ಸಿ ಹೆಚ್ ಸುಬ್ರಹ್ಮಣ್ಯ ಭಟ್ ವಂದಿಸಿದರು. ಶಿಕ್ಷಕ ಶಂಕರನಾರಾಯಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪ್ರಕಾಶ್ ನಾಯಕ್, ಶಿಕ್ಷಕಿಯರಾದ ಗೀತಾ, ವಾಣಿ ಮತ್ತು ಸೀತಾಲಕ್ಷ್ಮಿ ಸಹಕರಿಸಿದರು. ಚಿತ್ರಕಲಾ ಶಿಕ್ಷಕ ಉದಯ ಕುಮಾರ್ ತಾವು ರಚಿಸಿದ ಕಮಲಾವತಿಯವರ ಚಿತ್ರವನ್ನು ನೀಡಿದರು. ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *