ಉಳ್ಳಾಲ: ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ವತಿಯಿಂದ ಪ್ರವಾದಿ ಜನ್ಮ ದಿನದ ಪ್ರಯುಕ್ತ ದೇರಳಕಟ್ಟೆಯ ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಸಿ.ಎಂ ಅಬ್ದುಲ್ ಸತ್ತಾರ್ ಚಾಲನೆ ನೀಡಿದರು.

skssf deralakatte clean 01
ನಂತರ ಮಾತನಾಡಿ ಅವರು ಒಂದು ದಿನ ಸ್ವಚ್ಛತೆ ಮಾಡುದರಿಂದ ನಮ್ಮ ಪರಿಸರ ಸ್ವಚ್ಛ ಸುಂದರವಾಗಲು ಸಾಧ್ಯವಿಲ್ಲ. ಸ್ಥಳೀಯ ಸಂಘ ಸಂಸ್ಥೆಗಳು ಸ್ವಚ್ಛತೆ ಕಾರ್ಯಕ್ರಮ ಮಾಡುದರಿಂದ ಸ್ಚಚ್ಛತೆಯ ಬಗ್ಗೆ ಜಾಗೃತಿ ಉಂಡು ಮಾಡುತ್ತಾದೆ. ಪ್ರವಾದಿಯೂ ಸ್ವಚ್ಛತೆಗೆ ನೀಡಿ ಮಹತ್ವ ನೀಡಿದ್ದು ಪ್ರವಾದಿಯ ಜನ್ಮ ದಿನದಂದು ನಮ್ಮ ಪರಿಸರ ಸ್ವಚ್ಛ ಮಾಡುವ ಮೂಲಕ ಪ್ರವಾದಿಯ ಸಂದೇಶ ಜಗತ್ತಿಗೆ ನೀಡಲು ಸಾಧ್ಯ ಎಂದು ಹೇಳಿದರು.

ಬೆಳ್ಮ ಗ್ರಾ.ಪಂ ಸದಸ್ಯ ಕಬೀರ್ ಡಿ, ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯಾಧ್ಯಕ್ಷ ಇಬ್ರಾಹೀಂ ಕೊಣಾಜೆ, ಹಯಾತುಲ್ ಇಸ್ಲಾಂ ಮದರಸ ಮುಹಲ್ಲೀಂ ಜಬ್ಬಾರ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ಮಾಜಿ ಅಧ್ಯಕ್ಷ ಸೈಯದಾಲಿ, ಅಧ್ಯಕ್ಷ ನೌಫಲ್ ಬಿ, ಕಾರ್ಯದರ್ಶಿ ನೌಷಾದ್ ಬದ್ಯಾರ್, ಪ್ರ.ಕಾರ್ಯದರ್ಶಿ ಮೂನ್ಸೀದ್, ಸದಸ್ಯರಾದ ಉಬೈದ್, ರಹ್ಮಾತುಲ್ಲಾ, ಜಾವೀದ್, ಇರ್ಫಾನ್ ಈ ಸಂದರ್ಭ ಉಪಸ್ಥಿತರಿದರು.

By suddi9

Leave a Reply

Your email address will not be published. Required fields are marked *