ಬಜಪೆ:ನಕಲಿ ಟಿಕೇಟ್ ಬಳಸಿ ಮುಂಬೈಗೆ ವಿಮಾನದ ಮೂಲಕ ಹೋಗಲೆತ್ನಿಸಿದ ಯುವಕನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಶುಕ್ರವಾರ ಬಂಧಿಸಿ ಬಜಪೆ ಪೋಲಿಸರಿಗೆ ಹಸ್ತಾಂತರಿಸಿದ್ದಾರೆ.
ದೇರಳಕಟ್ಟೆಯ ನಿವಾಸಿ ಅಬ್ದುಲ್ ಮೆಹಸುಕ್ (20) ಎಂಬಾತನೆ ಬಂಧಿತ ಆರೋಪಿ. ಈತ ಅಬ್ದುಲ್ ಜಲೀಲ್ ಹಸನಬ್ಬ ಎಂಬವರ ಟಿಕೇಟನ್ನು ಬಳಸಿ ಜಲೀಲ್ ಅವರ ಹೆಸರನ್ನು ಅಳಿಸಿ ಕಂಪ್ಯೂಟರ್ ಮೂಲಕ ತನ್ನ ಹೆಸರನ್ನು ನಮೂದಿಸಿ11.15 ರ ಜೆಟ್ ಏರ್‍ವೇಸ್ ಮೂಲಕ ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತಪಾಸಣೆಯ ವೇಳೆ ಟಿಕೇಟು ನಕಲಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿ ಐ ಎಸ್ ಎಫ್ ನವರು ಅಬ್ದುಲ್ ಮೆಹಸುಕ್‍ನನ್ನು ಬಂಧಿಸಿ ಬಜಪೆ ಪೋಲಿಸರ ವಶಕ್ಕೆ ನೀಡಿದ್ದು ವಿಚಾರಣೆಯ ಬಳಿಕ ಆತನನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 

By suddi9

Leave a Reply

Your email address will not be published. Required fields are marked *