ಬಂಟ್ವಾಳ : ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ್ ಸಿ.ಡಿ ಯವರು ಕಲಬುರ್ಗಿ ಜಿಲ್ಲೆಯ ಅಲಂದ ಎಂಬಲ್ಲಿಗೆ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ಸಂದರ್ಭದಲ್ಲಿ ಬಂಟ್ವಾಳ ವಕೀಲರ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ಜರಗಿತು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀ ಶರಾದ ಚಂದ್ರಶೇಖರ ಯು. , ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶರಾದ ಪ್ರತಿಭಾ ಡಿ.ಎಸ್, ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ಉಪಾಧ್ಯಕ್ಷ ಸುರೇಶ್ ಕುಮಾರ್ ನಾವೂರು, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್, ಜತೆ ಕಾರ್ಯದರ್ಶಿ ವಿನೋದ, ಹಿರಿಯ ನ್ಯಾಯವಾದಿಗಳಾದ ಪುಂಡಿಕಾೈ ನಾರಾಯಣ ಭಟ್, ಕೆ.ರಮೇಶ್ ಉಪಾಧ್ಯಾಯ, ಕೆ.ವಿ.ಭಟ್, ಅಶ್ವನಿ ಕುಮಾರ್ ರೈ, ಗಣೇಶಾನಂದ ಸೋಮಯಾಜಿ, ಶ್ರೀಧರ ಪೈ, ಭಾನುಶಂಕರ್, ಜಯರಾಮ್ ರೈ, ಶೀನಪ್ಪ, ಸತೀಶ್ ಕುಮಾರ್ ಶಿವಗಿರಿ, ಮೊಗರ್ನಾಡ್ ವೆಂಕಟೇಶ್ ಭಟ್,ಶ್ರೀನಿವಾಸ ದೈಪಲ, ಆಶಾಪ್ರಸಾದ್ ರೈ, ಶಕೀನಾ, ಆಶಾಮಣಿ ರೈ, ರ ವೀಂದ್ರ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

