ಕೈಕಂಬ: ಬೀಡಿ ಉದ್ಯಮ ಕುಸಿತ ಕಾಣುತ್ತಿರುವ ಈ ಸಂದರ್ಭದಲ್ಲಿ ಹೈನುಗಾರಿಕೆ ಗ್ರಾಮೀಣ ಮಹಿಳೆಯರ ಆದಾಯಕ್ಕೆಉತ್ತಮ ಅವಕಾಶವಾಗಿದೆ ಎಂದು ಮಂಗಳೂರು ದ.ಕ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಹೇಳಿದರು. ಅವರು ಮಂಗಳವಾರ ಸಮುದಾಯ ಭವನ ಗೆಂದಡ್ಪು ಕುಲವೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಹಾಲು ಒಕ್ಕೂಟ ರೈತರಿಗೆ ಮತ್ತು ಹೈನೋದ್ಯಮದಲ್ಲಿತೊಡಗಿಸಿಕೊಂಡವರಿಗಾಗಿ ಹಲಾವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಇವುಗಳ ಸದುಪಯೋಗ ಪಡೆದುಕೊಂಡು ಕಲಬೆರಕೆ ರಹಿತವಾದ,ಗುಣಮಟ್ಟದ ಹಾಲು ಉತ್ಪಾದಿಸುವ ಮೂಲಕ ಕುಲವೂರಿನ ಮಹಿಳಾ ಸಹಕಾರ ಸಂಘವುಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಹಸು ನಮ್ಮ ಮಾತೆ ಹಸು ಮನುಷ್ಯನಿಗೆಹಾಲು ನೀಡಿದರೆ ಭೂಮಿಗೆ ಗೊಬ್ಬರ ನೀಡುವ ಮೂಲಕ ಭೂಮಿಯನ್ನು ಹಸನುಗೊಳಿಸುತ್ತದೆ. ಇಂತಹ ಪವಿತ್ರವಾದ ಹಸುವಿನಿಂದ ಕುಲವೂರಿನ ಮಹಿಳಾ ಸಹಕಾರ ಸಂಘ ಅಭಿವೃದ್ಧಿಪಥದತ್ತ ಸಾಗಲಿ ಎಂದು ಶ್ರೀ ಜಗನ್ನಾಥ ಮಂದಿರ ಕುಡುಪುಕಟ್ಟೆ ಶ್ರೀ ಸ್ಮಿತಾಕೃಷ್ಣ ದಾಸ್ ಸ್ವಾಮೀಜಿ, ಆಶೀರ್ವದಿಸಿದರು.
ಮಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಕೆ.ಎಂ.ಕೃಷ್ಣ ಭಟ್, ನರಹರಿ ಪ್ರಭು, ವೀಣಾ ರೈ, ಡಾ. ಬಿ.ವಿ ಸತ್ಯನಾರಾಯಣ, ಮುತ್ತೂರು ಗ್ರಾ.ಪಂ ಅಧ್ಯಕ್ಷೆ ನಾಗಮ್ಮ, ಮಹಿಳಾ ಹಾ.ಉ.ಸಂಘದ ಅಧ್ಯಕ್ಷೆ ಕಸ್ತೂರಿ ಜೆ.ಶೆಟ್ಟಿ, ಉಪಾಧ್ಯಕ್ಷೆ ಸಂಘದ ಕಾರ್ಯದರ್ಶಿ ಶ್ವೇತಾ ಎಸ್.ಬಳ್ಳಾಜೆ. ವಾಣಿ ವಿ.ಆಳ್ವ ಉಪಸ್ಥಿತರಿದ್ದರು.

ಗಣೇಶ್ ಪಾಕಜೆ ಸ್ವಾಗತಿಸಿ ದಯನಂದ ಶೆಟ್ಟಿ ಪುನ್ಕೆದಡಿ ವಂದಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಸಮೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



