ಮೂಡುಬಿದಿರೆ: ಇಲ್ಲಿನ ಅಶ್ವತ್ಥಪುರದ ಸಂಪಿಗೆ ಎಂಬಲ್ಲಿ ಇಂಟರ್‍ಲಾಕ್ ಮತ್ತು ರಿಕ್ಷಾ ತಂಗುದಾಣ ಮೇಲ್ಭಾವಣಿಯನ್ನು  ಸರ್ಕಾರದ ಮುಖ್ಯ ಸಚೇತಕ ಐವನ್ ಡಿ ಸೋಜಾ ರವಿವಾರ ಉದ್ಘಾಟಿಸಿದರು.

Sampige

ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಎರಡು ಲಕ್ಷ ರೂ ಅನುದಾನ ಒದಗಿಸಿ ರೂಪಿಸಿದ ಈ ಕಾಮಗಾರಿಯನ್ನು ಉದ್ಘಾಟಸಿ ಮಾತನಾಡಿದ ಅವರು ರಿಕ್ಷಾ ಚಾಲಕರು ನಿಸ್ವಾರ್ಥ ಸೇವೆಯಿಂದ ಜನತೆಯಲ್ಲಿ ವಿಶ್ವಾಸ ಮೂಡಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಗುರುರಾಜ್ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಪುತ್ತಿಗೆ ಪಂಚಾಯತ್ ಸದಸ್ಯರಾದ ನಾಗರಾಜ ಕರ್ಕೆರಾ, ನಾಗವರ್ಮ ಜೈನ್, ರಾಘು ಕೋಟ್ಯಾನ್, ಕಲ್ಲಮುಂಡ್ಕೂರು ಪಂಚಾಯತ್ ಸದಸ್ಯರಾದ ಸತೀಶ್ ಅಮೀನ್,ಮಾಜಿ ತಾ.ಪಂ. ಸದಸ್ಯ ಲಾಜರಸ್ ಡಿ ಕೋಸ್ತಾ, ಸಂಪಿಗೆ ಶಾಲಾ ಶಿಕ್ಷಕ ನಾಗರಾಜ ರಾವ್, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ನವೀನ್ ಪೂಜಾರಿ. ಕಾರ್ಯದರ್ಶಿ ರವಿಶಂಕರ್ ಭಟ್, ನವೀನ್ ದೇವಾಡಿಗ, ಕರುಣಾಕರ, ಬಿಎಂ.ಎಲ್ ದಿನೇಶ್ ಭಟ್, ಮೋನಪ್ಪ ಸಂಪಿಗೆ, ವಿಶ್ವರಾಕ್ ಕರ್ಕೆರಾ, ಅರುಣ ಕುಲಾಲ್, ಜಯಕುಮಾರ್, ತುಕಾರಾಮ ಕರ್ಕೇರಾ, ಗಿಲ್ಬರ್ಟ್ ಪಿಂಟೋ, ಸಂತೋಷ್ ಶೆಟ್ಟಿ, ಅಶೋಕ್ ಪೂಜಾರಿ, ನ್ಯಾಯವಾದಿ ಪದ್ಮಪ್ರಸಾದ್ ಜೈನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *