ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಪ್ರಕ್ರೀಯೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ದೇವಳದ ನೂತನ ಧ್ವಜಸ್ತಂಭವನ್ನು ಬಿಲ್ಲವಸಮಾಜದ ವತಿಯಿಂದ ಸೇವಾ ರೂಪವಾಗಿ ಸಮರ್ಪಿಸುವ ಕುರಿತು ನೂತನ ಧ್ವಜಸ್ತಂಭದ ನಿರ್ಮಾಣ ಸಮಿತಿ ಬಿಲ್ಲವ ಸಮಾಜದ ಹಿರಿಯರ ಮಾರ್ಗದರ್ಶನದಂತೆ ನ. 5ರಂದು ಭಾನುವಾರ ಪೊಳಲಿ ಸರ್ವಮಂಗಳಾದಲ್ಲಿ ಪೂರ್ವಭಾವಿ ಸಭೆ ಜರುಗಿತು.
ನ.19ರಂದು ಶೋಭಾಯಾತ್ರೆ
ಧ್ವಜಸ್ತಂಭವನ್ನು ನ.19 ರಂದು ಬೆಳಗ್ಗೆ 9.ಗಂಟೆಗೆ ಬಿಸಿರೋಡು ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಿಂದ ವಿಧ ವಾದ್ಯ ಘೋಷಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ಪೊಳಲಿಗೆ ತರುವುದೆಂದು ತೀರ್ಮಾನಿಸಲಾಯಿತು. ಗೊಂಬೆಬಳಗ, ಕಾರ್ಣಿಕ ಪುರುಷರ ವಿವಿಧ ಟ್ಯಾಬ್ಲೋ, ಭಜನೆ, ನಾಶಿಕ್ ಬ್ಯಾಂಡ್, ಕೊಂಬು, ಚೆಂಡೆ ಬಳಗ, ಬ್ಯಾಂಡ್ ವಾದ್ಯ ಶೋಭಾಯತ್ರೆಗೆ ಮೆರುಗು ನೀಡಲಿದೆ. ಸ್ವಾಮೀಜಿಗಳು ವಿವಿಧ ಧಾರ್ಮಿಕ ಮುಖಂಡರು , ದೇವಳದ ಪ್ರಮುಖರು ಹಾಗೂ ಎಲ್ಲಾ ಸಮಾಜದ ಬಾಂದವರು ಬಾಗವಹಿಸಲಿದ್ದಾರೆ ಎಂದು ನಿರ್ಮಾಣ ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ನಿರ್ಮಾಣ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಗೌರವಧ್ಯಕ್ಷ ರಾಮ್‍ದಾಸ್ ಮಜಿಲಗುತ್ತು,ಪ್ರ.ಕಾರ್ಯದರ್ಶಿ ಪುರುಷ ಸಾಲಿಯಾನ್,ಬಳ್ಳಿ ಚಂದ್ರಶೇಖರ ಕೈಕಂಬ,ಗೋಪಾಲಕೃಷ್ಣ ಕೈಕಂಬ, ಶಂಕರ ಪೂಜಾರಿ,ಉಮೇಶ್ ಬಾರಿಂಜೆ,ಜಯಾನಂದ ಪಲ್ಲಿಪಾಡಿ, ಯಶವಂತ ಕೋಟ್ಯಾನ್, ಸಂಚಾಲಕರಾದ ಭುವನೇಶ್ ಪಚಿನಡ್ಕ, ಚಂದಪ್ಪ ಅಂಚನ್,ಮಜಿಲಗುತ್ತು,ದೋಗು ಪೂಜಾರಿ ಮಟ್ಟಿ, ನಾರಾಯಣ ಎಂ.ಅಮ್ಮುಂಜೆ, ರಾಜು ಕೋಟ್ಯಾನ್ ಪಲ್ಲಿಪಾಡಿ, ರಾಮಪ್ಪ ಪೂಜಾರಿ,ಲೋಕೇಶ್ ಭರಣಿ,ಗಂಗಾಧರ ಪೂಜಾರಿ ಅಮ್ಮುಂಜೆ, ಸೋಮಶೇಖರ ಪೂಜಾರಿ ಪೊಳಲಿ, ಗಣೇಶ್ ಪೂಜಾರಿ, ಚರಣ್ ಮಂಗಾಜೆ, ಕಾಜಿಲ ಸದಾಶಿವ , ನವೀನ್ ಬಿಸಿರೋಡು ಮತ್ತು ಸಾವಿರ ಸೀಮೆಯ ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.




