ವಿಟ್ಲ: ಹವ್ಯಾಸಿ ಯಕ್ಷ ಬಳಗ ವಿಟ್ಲ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ 9-30 ರಿಂದ ಸಂಜೆ 7 ರ ತನಕ ಅಮೋಘ ಯಕ್ಷಗಾನ ತಾಳಮದ್ದಳೆ `ಮಹಿಷ ವಧೆ’, `ಕರ್ಣಾರ್ಜುನ’ ಮತ್ತು `ಸುಭದ್ರಾ ಕಲ್ಯಾಣ’ ವು ನಡೆಯಿತು. ಈ ಸಂದರ್ಭದಲ್ಲಿ ಅನುಭವಿ ಹವ್ಯಾಸಿ ಭಾಗವತರಾದ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಇವರನ್ನು ಹವ್ಯಾಸಿ ಯಕ್ಷ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಜಯರಾಮ ವರ್ಮ, ಪುತ್ತೂರು ಬೊಳುವಾರು ಶ್ರೀ ಆಂಜನೇಯ ಯಕ್ಷ ಕಲಾಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ, ಕಲಾವಿದರುಗಳಾದ ಪಕಳಕುಂಜ ಶ್ಯಾಂ ಭಟ್, ಮೋನಪ್ಪ ಸೇರಾಜೆ, ಸಂಜೀವ ಪೂಜಾರಿ, ಪೂರ್ಲಪ್ಪಾಡಿ ಈಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.
