ಮಂಗಳೂರು : ದಕ್ಷಿಣ ಕನ್ನಡ ಜಿಪಂ, ದ ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಇಲಾಖೆ, ದ ಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ನೀಡುವ ಜಿಲ್ಲಾ ರಾಜ್ಯೋತ್ಸವ ಹೊರನಾಡ ಪ್ರಶಸ್ತಿಯನ್ನು ಮುಂಬೈ ಹೊರವಲಯ ಥಾಣೆಯ `ಚಿಣ್ಣರ ಬಿಂಬ’ ಪ್ರತಿಭಾನ್ವತ ಬಾಲಕಿ ಶ್ರಾವ್ಯಾ ಎಸ್ ಶೆಟ್ಟಿಗೆ ನ. 1ರಂದು ಪ್ರದಾನಿಸಲಾಯಿತು.gur-nov-shravya-1

gur-nov-shravya-2 (1)
ಬಹುಮುಖ ಪ್ರತಿಭೆಯ ಶ್ರಾವ್ಯಾ, ಬಂಟ್ವಾಳ ತಾಲೂಕಿನ ಮಡಂತ್ಯಾರು ಶಶಿಧರ ಶೆಟ್ಟಿ ಮತ್ತು ಚಿಣ್ಣರ ಬಿಂಬ ಥಾಣೆ ಶಿಬಿರದ ಕನ್ನಡ ಶಿಕ್ಷಕಿ, ಯಕ್ಷಗಾನ ಕಲಾವಿದೆ ಬಜ್ಪೆ ನೆಲ್ಲಿದಡಿಗುತ್ತು ಶೋಭಾ ಶೆಟ್ಟಿ ದಂಪತಿಯ ಪುತ್ರಿ. ಥಾಣೆಯ ನವೋದಯ ಆಂಗ್ಲ ಮಾಧ್ಯಮ ಹೈಸ್ಕೂಲಿನ ಏಳನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಪಠ್ಯದ ಜೊತೆಗೆ ಯಕ್ಷಗಾನ, ಭರತನಾಟ್ಯ, ನೃತ್ಯ, ಶಾಸ್ತ್ರೀಯ ಸಂಗೀತ, ಕ್ರೀಡೆಯಲ್ಲಿ ವಿಶೇಷ ಸಾಧನೆಗೈದಿದ್ದಾಳೆ. ಈಗಾಗಲೇ ಹಲವು ಪ್ರಶಸ್ತಿ ಗಳಿಸಿರುವ ಶ್ರಾವ್ಯಾ ಸಾಧನೆಗೆ ಚಿನ್ನರ ಬಿಂಬದ ರೂವಾರಿ, ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಯಕ್ಷಗಾನ ಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಮೊದಲಾದವರು ಅಭಿನಂದನೆ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *