ಮೂಡುಬಿದಿರೆ: ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ `ಬದುಕು-ಬದುಕಲು ಬಿಡು’ ಸಮಾವೇಶವು ನ.14ರಂದು ನಡ್ಯೋಡಿ ದೇವಸ್ಥಾನದಲ್ಲಿ ನಡೆಯಲಿದ್ದು, ಶುಕ್ರವಾರ ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.???????????????????????????????

ಕಾರ್ಯಕ್ರಮದ ಸಂಘಟಕ, ಅಖಿಲ ಭಾರತ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುದತ್ತ ಜೈನ್ ಸಮಾವೇಶದ ಕುರಿತು ಮಾಹಿತಿ ನೀಡಿ, ಸಮಾವೇಶದ ಪ್ರಯುಕ್ತ ನ.14ರಂದು ಸಾಯಂಕಾಲ 6.45ಕ್ಕೆ ಗೋಪೂಜೆ ನಡೆಯಲಿದೆ. ಬಳಿಕ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ 4 ಗಂಟೆಯಿಂದ ವಿಶ್ವಾಸ್ ಮೆಲೋಡಿಸ್ ಗುರುಪುರ ತಂಡದಿಂದ ರಸಮಂಜರಿ, ರಾತ್ರಿ 8 ಗಂಟೆಗೆ ಸಾಂಸ್ಕೃತಿಕ  ವೈವಿಧ್ಯ ಹಾಗೂ ರಾತ್ರಿ 9ಗಂಟೆಯಿಂದ ಪಂಚಶಕ್ತಿ ಕಲಾವಿದೆರ್ ಶಿರ್ತಾಡಿ ತಂಡದಿಂದ `ಸಂಬಂಧದಾಯೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ನಡ್ಯೋಡಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಿಲೀಪ್ ಶೆಟ್ಟಿ, ಕಾಶಿಪಟ್ನ ಗ್ರಾಪಂ ಮಾಜಿ ಸದಸ್ಯ ಪ್ರಶಾಂತ್ ಅಮೀನ್, ರೈತ ಸಂಘ ಮಾರ್ಪಾಡಿ ಘಟಕದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *