ಸುದ್ದಿ9 ಕೈಕಂಬ: ಸೋದರ  ಸೋದರಿಯ ಗಾಢಸಂಬಂಧವನ್ನು ಬೆಸೆಯುವ ರಕ್ಷಾಬಂಧನ ಹಬ್ಬ ಹಿಂದೂಗಳಪಾಲಿಗೆ ಪವಿತ್ರ ಹಬ್ಬ. ಈ ವೇಳೆ ತಂಗಿಯಾದವಳು ಅಣ್ಣನಿಗೆ ರಾಖಿಯನ್ನು ಕಟ್ಟಿ ರಕ್ಷೆಯನ್ನು ಕೇಳಬೇಕು. ಅಣ್ಣ ತಂಗಿ ಸುಖ ದುಃಖ ಎಲ್ಲಕ್ಕೂ ಪಾಲ್ಗೊಂಡು ತಂಗಿಗಾಗಿ ಪ್ರಾರ್ಥಿಸಬೇಕು. ತಂಗಿಯೂ ಅಷ್ಟೆ, ಅಣ್ಣನಿಗಾಗಿ ಪ್ರಾರ್ಥಿಸುತ್ತಾ ರಕ್ಷೆ ಕಟ್ಟಬೇಕು.

rk3

rk

rk2

 

ಇತಿಹಾಸ:  ‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿ ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿ ನಾರಾಯಣನನ್ನು ಮುಕ್ತಗೊಳಿಸಿದಳು. ಅಂದು ಶ್ರಾವಣ ಹುಣ್ಣಿಮೆ ಆಗಿತ್ತು.’

ಭವಿಷ್ಯಪುರಾಣದಲ್ಲಿ ಹೇಳಿದಂತೆ ರಕ್ಷಾಬಂಧನವು ಮೂಲತಃ ರಾಜರಿಗಾಗಿತ್ತು. ರಾಖಿಯ ಒಂದು ಹೊಸ ಪದ್ಧತಿ ಇತಿಹಾಸಕಾಲದಿಂದ ಪ್ರಾರಂಭವಾಯಿತು.

ಭಾವನಾತ್ಮಕ ಮಹತ್ವ : ರಾಖಿಯನ್ನು ಸಹೋದರಿಯು ಸಹೋದರನ ಕೈಗೆ ಕಟ್ಟು ವುದಿರುತ್ತದೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ಸಹೋದರಿಯು ಸಹೋದರನಿಗೆ ರಾಖಿ ಕಟ್ಟುವುದಕ್ಕಿಂತ ಯಾರಾದರೊಬ್ಬ ಯುವಕನು/ಪುರುಷನು ಯಾರಾದರೊಬ್ಬ ಯುವತಿ ಯಿಂದ/ಸ್ತ್ರೀಯಿಂದ ರಾಖಿ ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ; ಇದರಿಂದ ಯುವತಿಯ ಕಡೆಗೆ/ಸ್ತ್ರೀಯರ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.
ರಾಖಿ ಕಟ್ಟುವುದು : ಅಕ್ಕಿ, ಬಂಗಾರ ಮತ್ತು ಬಿಳಿಸಾಸಿವೆಗಳನ್ನು ಒಂದುಗೂಡಿಸಿ ಸೆರಗಿನಲ್ಲಿ ಕಟ್ಟಿದರೆ ರಕ್ಷಾ ಅರ್ಥಾತ್ ರಾಖಿಯು ತಯಾರಾಗುತ್ತದೆ.

ಪ್ರಾರ್ಥನೆ : ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆ ಮಾಡುವುದರೊಂದಿಗೆ ಇಬ್ಬರೂ ‘ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ’, ಎಂದು ಈಶ್ವರನಲ್ಲಿ ಪ್ರಾರ್ಥನೆ ಯನ್ನು ಮಾಡಬೇಕು.

ರಾಖಿಯ ಮಾಧ್ಯಮದಿಂದಾಗುವ ದೇವತೆಗಳ ವಿಡಂಬನೆಯನ್ನು ತಡೆಗಟ್ಟಿರಿ !
ಇತ್ತೀಚೆಗೆ ರಾಖಿಯ ಮೇಲೆ ‘ಓಂ’ ಅಥವಾ ದೇವತೆಗಳ ಚಿತ್ರಗಳಿರುತ್ತವೆ. ರಾಖಿಯನ್ನು ಉಪಯೋಗಿಸಿದ ನಂತರ ಅದು ಆಚೀಚೆ ಬಿದ್ದು ದೇವತೆಗಳ ಅಥವಾ ಧರ್ಮಪ್ರತೀಕಗಳ ವಿಡಂಬನೆಯಾಗುತ್ತದೆ. ಇದರಿಂದ ಪಾಪ ತಗಲುತ್ತದೆ. ಇದನ್ನು ತಡೆಗಟ್ಟಲು ರಾಖಿಯನ್ನು ನೀರಿನಲ್ಲಿ ವಿಸರ್ಜಿಸಬೇಕು !

By suddi9

Leave a Reply

Your email address will not be published. Required fields are marked *