ಬಜ್ಪೆ: ಪೊಳಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳದಲ್ಲಿ ಎಲೆಮರೆಯ ಕಾಯಿಯಂತಿರುವ ಇಬ್ಬರು ಸಾಹಿತಿಗಳು ಹಾಗೂ ಅತಿಬುದ್ಧಿವಂತ ಬುದ್ಧಿಮಾಂದ್ಯ ಯುವಕ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪೊಳಲಿಯ ಸರ್ವಮಂಗಳ ಮಂಟಪದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಯ ಬಳಿ ಈ `ಎಲೆ ಮರೆಕಾಯಿಗಳು’ ಕಾಣಿಸಿಕೊಂಡರು.
ಉಗ್ಗಪ್ಪ ಪೂಜಾರಿ:

ಕಾರ್ಕಳ ನಿವಾಸಿ, ಅಪ್ಪಟ ಕೃಷಿಕ ಉಗ್ಗಪ್ಪ ಪೂಜಾರಿ ಕೃಷಿ ಜೊತೆ ಸಾಹಿತ್ಯ ಕೃಷಿ ಮಾಡಿಕೊಂಡಿದ್ದಾರೆ. ಸುಮಾರು 9 ಕೃತಿಗಳನ್ನು ಬರೆದಿರುವ ಇವರು ಮುದ್ರಣವನ್ನೂ ತಾವೇ ಮಾಡಿಕೊಂಡು ಸಮ್ಮೇಳನ, ವಸ್ತುಪ್ರದರ್ಶನದ ವೇಳೆ ತಮ್ಮ ಕೃತಿಯನ್ನು ಮಾರಿ ಅದರಿಂದ ಜೀವನ ಸಾಗಿಸುವ ಬಡ ಸಾಹಿತಿ. ತುಳುವಿನಲ್ಲಿ ಇವರು ಈವರೆಗೆ 9 ಕೃತಿಗಳನ್ನು ಬರೆದಿದ್ದಾರೆ. ಪಚ್ಚೆ ಸಿರಿ, ತುಳುನಾಡ ದೈವೊಲೆ ಉದಿಪು, ಕತೆಕ್ಲೆನ ಪೊದಿಕೆ(ಅಜ್ಜಿಕತೆ) ಇವರ ಜನಪ್ರಿಯ ಕೃತಿಗಳು. ತಾವೇ ಸ್ವತಃ ಅಕ್ಷರಭ್ಯಾಸ ಮಾಡಿಕೊಂಡು, ಅಪ್ಪಟ ದೇಸೀ ಶೈಲಿಯಲ್ಲಿ ಕೃತಿ ರಚಿಸುವ ಉಗ್ಗಪ್ಪ ಪೂಜಾರಿಯವರನ್ನು ಯಾವುದೇ ಸಂಘಸಂಸ್ಥೆಗಳು, ತುಳು ಸಾಹಿತ್ಯ ಅಕಾಡೆಮಿಯಾಗಲಿ ಗುರುತಿಸಿಲ್ಲ.
ಕೆ.ಕೃಷ್ಣ ಶೆಟ್ಟಿ(ಕುಡುಮಲ್ಲಿಗೆ)

ಕುಡುಮಲ್ಲಿಗೆ ಎಂಬ ಕಾವ್ಯನಾಮದಿಂದ ಪರಿಚಿತರಾದ ಕೃತಿಕಾರ ಕೆ.ಕೃಷ್ಣ ಶೆಟ್ಟಿ ಎಂಬವರು ಮೂಲತಹ ಮಲೆನಾಡಿನ ತೀರ್ಥಹಳ್ಳಿಯ ಸಮೀಪದ ಕುಡುಮಲ್ಲಿಗೆ ಎಂಬ ಪ್ರದೇಶದವರು. ಉದ್ಯೋಗ ನಿಮಿತ್ತ ಮುಂಬೈಗೆ ತೆರಳಿ ಬಳಿಕ ತೀರ್ಥಹಳ್ಳಿ, ಶಿವಮೊಗ್ಗ ಉಡುಪಿಯಲ್ಲಿ ನೆಲೆಸಿ ಸದ್ಯ ಕಾವೂರಿನ ಶಾಂತಿನಗರ ಎಂಬಲ್ಲಿ ನೆಲೆನಿಂತಿದ್ದಾರೆ. ಪತ್ರಕರ್ತರಾಗಿದ್ದುಕೊಂಡು, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಯಲ್ಲಿ ಪ್ರೌಢಿಮೆ ಬೆಳೆಸಿ ಭಾಷಾಂತರಕಾರಿಯಾಗಿ ಸೇವೆ ಸಲ್ಲಿಸಿ, ಯಕ್ಷಗಾನ ಅರ್ಥದಾರಿಯಾಗಿಯೂ ಇದ್ದರು. ಯಾವುದೇ ಪ್ರಚಾರದ ಲಾಬಿಗೆ ಸಿಲುಕದೆ ತನ್ನಷ್ಟಕ್ಕೆ ಸಾಹಿತ್ಯದಲ್ಲಿ ತೊಡಕಿಕೊಂಡು ಎಲೆಮರೆಯ ಕಾಯಿಯಂತಿರುವ ಕುಡುಮಲ್ಲಿಗೆಯವರನ್ನು ಕನ್ನಡದ ಸಂಘಸಂಸ್ಥೆಗಖು ಗುರುತಿಸಲಿಲ್ಲ. ಯಕ್ಷಗಾನ ಪುರಾಣ ಜ್ಞಾನ ದರ್ಶನ, ಸಮಾಜಮುಖಿ- ಅನುಬಂಧ, ಚಿಂತನಧಾರೆ ಇವರ ಪ್ರಸಿದ್ಧ ಕೃತಿಗಳು.
ಅತಿಬುದ್ಧಿವಂತ ಪುತ್ತೂರು ಸುರೇಶ್ ನಾಯಕ್

ಚಿಕ್ಕಂದಿನಲ್ಲೇ ಯುರೇನಿಯಂ ಬಾಂಬ್ ಕಂಡುಹಿಡಿದ ಇಂಗ್ಲೆಡ್ನ ಅತಿಬುದ್ಧಿವಂತ ಡೇವಿಡ್ ಹಾನ್ನಂಥಹಾ ಮನಸ್ಥಿತಿಯನ್ನು ಹೊಂದಿರುವ ಪುತ್ತೂರಿನ ಸುರೇಶ್ ನಾಯಕ್ ಎಂಬವರು ತನ್ನ ಸಂಬಂಧಿಕರೊಬ್ಬರ ಜೊತೆ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಇವರಿಗೀಗ 41 ವರ್ಷ ವಯಸ್ಸು. ಹುಟ್ಟಿನಿಂದಲೇ ಡೌನ್ ಸೀಂಡ್ರೋಮ್ ಎಂಬ ಬುದ್ಧಿಮಾಂದ್ಯ ಕಾಯಿಲೆಯಿಂದ ಬಳಲುತ್ತಿರುವ ಸುರೇಶ್ ನಾಯಕ್ ಅಗಾಧ ಸ್ಮರಣ ಶಕ್ತಿಯಿಂದ 2013ರಲ್ಲಿ ಲಿಮ್ಕಾ ಪುಸ್ತಕದಲ್ಲಿ ಇವರ ಹೆಸರು ದಾಖಲಾಗಿದೆ. ಇವರು ತನ್ನ ಅಗಾಧ ಸ್ಮರಣಶಕ್ತಿಯಿಂದ ಒಂದೇ ಬಾರಿ 700 ಪದಗಳನ್ನು ನೆನಪಲ್ಲಿಡುತ್ತಾರೆ. ಮೊಬೈಲ್ ನಂಬರ್ ಒಮ್ಮೆ ಬರೆದುತೋರಿಸಿದರೆ ಅದನ್ನು ಮನದಲ್ಲಿ ನೆನಪಿನಲ್ಲೇ ಇಟ್ಟುಕೊಳ್ಳುತ್ತಾರೆ. ಇವರಿಗೆ 2013ರರಲ್ಲಿ ಕನರ್ಾಟಕದ ರಾಜ್ಯ ಪ್ರಶಸ್ತಿ ಸಂದಿದೆ. ಅಲ್ಲದೆ ಇವರು ಜಾದೂವಿನ ಮೂಲಕ ವಿಕಲಚೇತ ಜನಜಾಗೃತಿ ಅಭಿಯಾನ ನಡೆಸಿಕೊಡುತ್ತಾರೆ. ಇವರನ್ನು ಸಂಪಕರ್ಿಸಲು 9844401295 ಎಂಬ ದೂರವಾಣಿ ಸಂಖೆಯ ನೆರವು ಪಡೆಯಬಹುದು.
