ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನಿಂದ ಹೊರಟ ಬಸ್ ಬ್ರೇಕ್ ಪೈಲ್ ಆದ ಖಾಸಾಗಿ ಸಿಟಿ ಬಸ್ಸೊಂದು ಚಾಲಕನ ಸಮಯಪ್ರಜ್ಞೆ ಯಿಂದ ಯಾವುದೇ ಅಪಾಯವಾಗದೆ ಪಾರದ ಘಟನೆ ಶುಕ್ರವಾರ ಮಧ್ಯಾಹ್ನ ಜ್ಯೋತಿ ಪರಿಸರದಲ್ಲಿ ನಡೆದಿದೆ.

af7cb624-21ee-4ed6-8214-b3559e16980e
ವಿಷಯ: ಸ್ಟೇಟ್ ಬ್ಯಾಂಕ್ ಬಸ್‍ನಿಲ್ದಾಣದಿಂದ ಕದ್ರಿ. ಬೋದೇಲ್ ಮಾರ್ಗವಾಗಿ ಕಾವೂರಿಗೆ ಹೊರಟಿದ್ದ 14 ಎ ನಂಬ್ರದ ಪಿಟಿಸಿ ಸಿಟಿ ಬಸ್ಸು ಬಾವುಟಗುಡ್ಡೆ ದಾಟಿ ಜ್ಯೋತಿ ಜಂಕ್ಷನ್ ಸಾಗುತ್ತಿದ್ದ ಸಂದರ್ಭದಲ್ಲಿ ಬ್ರೇಕ್ ವೈಪಲ್ಯಗೊಂಡಿತ್ತು.

ಇದನ್ನರಿತ ಬಸ್ ಚಾಲಕ ಕಾವೂರಿನ ಶ್ರೀಕಾಂತ್ ತನ್ನ ಸಮಯ ಪ್ರಜ್ಞೆಯಿಂದ ಬಸ್ಸನ್ನು ಯಾವೂದೇ ವಾಹನ ಅಥಾವ ಜನರಿಗೆ ತೊಂದರೆಯಾಗದಂತೆ ತನ್ನ ಜಾಣ್ಮೆಯಿಂದ ಬಸ್ಸನ್ನು ಚಲಾಯಿಸಿ ಬದಿಗೆ ನಿಲ್ಲಿಸಿದ. ಇದನ್ನರಿತ  “ಫ್ರೆಂಡ್ಸ ಬಲ್ಮಠ” ಸಾಮಾಜಿಕ ಸಂಘಟನೆಯ ಸದಸ್ಯರು ಚಾಲಕ ಶ್ರೀಕಾಂತ್‍ನನ್ನು ಸ್ಥಳದಲ್ಲಿಯೇ ಸಮ್ಮಾನಿಸಿದರು. ಯಶು ಪಕ್ಕಳ, ರಾಮ ಮಂಕುಡೆ,ನಿತೇಶ್ ರೈ,ಲೋಕೇಶ್ ಶೆಟ್ಟಿ,ಬಸ್ಸ್ ನಿರ್ವಾಹಕ ರಿತೇಶ್, ಟ್ರಾಫಿಕ್ ಪೋಲೀಸ್ ಸಿಬಂದಿ ಮಂಜಪ್ಪ ಮತ್ತು ಆಂಜನೇಯ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *