ಪುಂಚಮೆ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗುಡ್ಡೆಯಲ್ಲಿಅಕ್ರಮ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ದಾಳಿ ನಡೆಸಿ ಆರು ಮಂದಿಯನ್ನು ಬಂದಿಸಿದ ಘಟನೆ ನಡೆದಿದೆ.
ಬಂದಿತರನ್ನು ಜಗದೀಶ ಮೂಲ್ಯ ರವೀಂದ್ರ ಪೂಜಾರಿ ಅನ್ವರ್ ಶರೀಪ್ ನವೀನ್ ಕರುಣಾಕರ ಹಂಝ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯ ಎಸ್ಯೆ ಪ್ರಸನ್ನ ಕುಮಾರ್ ಎಚ್ ನೇತ್ರತ್ವದಲ್ಲಿ ದಾಳಿ ನಡೆಸಿ ಜುಗಾರಿಯಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಬಂದಿಸಿ ಸುಮಾರು ಒಂದು ಲಕ್ಷ ಐವತ್ತು ಸಾವಿರ ರೂ ಮ್ಔಲ್ಯದ ವಾಹನ ಸಹಿತ ಮೊಬೈಲ್ ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿದ್ದಾರೆ
