ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಕೆಲಸಕಾರ್ಯಗಳು ಊರ ಹಾಗೂ ಪರವೂರ ಭಕ್ತರ ಕರಸೇವೆಯ ಮುಖಾಂತರ ನವೀಕೃತ ದೇವಳದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಈದೀಗ ಶ್ರೀ ದೇವರ ನೂತನ ಧ್ವಜಸ್ತಂಭವನ್ನು ಬಿಲ್ಲವ ಸಮಾಜದ ಭಕ್ತ ಬಾಂಧವರು ಸಮರ್ಪಿಸುವ ಕುರಿತು ಧ್ವಜಸ್ತಂಭವನ್ನು ಅದ್ದೂರಿಯಾಗಿ ಮೆರವಣಿಗೆಯಲ್ಲಿ ತರಲಾಗುವುದು ಎಂದು ಈ ಮೊದಲ ಸಭೆಯಲ್ಲಿ ತೀರ್ಮಾನಿಸಲಾಗಿತ್ತು . ಇದರ ಸಮಾಲೋಚನಾ ಸಭೆಯನ್ನು ಇಂದು ಭಾನುವಾರ ಸಂಜೆ 3 ಗಂಟೆಗೆ ಪೊಳಲಿ ಸರ್ವಮಂಗಳ ಹಾಲ್ ನಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ.

ಬಿಲ್ಲವ ಮಹಾಮಂಡಳದ ಉಪಾಧ್ಯಕ್ಷ ರಾಜಶೇಖರ ಕೋಟ್ಯಾನ್, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬತ್ತಲ್ ಇದರ ಕಾರ್ಯಾಧ್ಯಕ್ಷ ಪಿತಾಂಭರ ಹೆರಾಜೆ, ಸೇಸಪ್ಪ ಕೋಟ್ಯಾನ್ ಪಚಿನಡ್ಕ,ಭುವನೇಶ್ ಪಚಿನಡ್ಕ, ಸಂತೋಷ್ ಕೋಟ್ಯಾನ್, ರವಿ ಪೂಜಾರಿ ಚಿಲಿಂಬಿ, ದೀಪಕ್ ಕೋಟ್ಯಾನ್ ಹಾಗೂ ಬಿಲ್ಲವ ಮುಖಂಡರು ಉಪಸ್ಥಿತರಿದ್ದಾರೆ.

By suddi9

Leave a Reply

Your email address will not be published. Required fields are marked *