ಬಂಟ್ವಾಳ:ತಾಲ್ಲೂಕಿನ ಮಿತ್ತೂರು ಮನೆತನದ ಕರ್ಗಲ್ಲು ನಿವಾಸಿ, ಭಾರತೀಯ ದಂತ ವೈದ್ಯಕೀಯ ಸಂಘದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಮಾಜಿ ರಾಜ್ಯಾಧ್ಯಕ್ಷ ಡಾ. ಎಂ.ಗೋಪಾಲಕೃಷ್ಣ ಭಟ್ (66) ಇವರು ಭಾನುವಾರ ಬೆಳಿಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ ಶಂಕರಿ, ಪುತ್ರ ಡಾ.ಅಶೋಕ್, ಪುತ್ರಿ ಡಾ. ಆಶಾ ಇದ್ದಾರೆ.
ಬಿ.ಸಿ.ರೋಡಿನಲ್ಲಿ ಕಳೆದ 1974ರಿಂದ ದಂತವೈದ್ಯರಾಗಿ ವೃತ್ತಿಜೀವನ ಆರಂಭಿಸಿದ್ದ ಇವರು, ಜಿಲ್ಲೆಯಾದ್ಯಂತ ದಂತವೈದ್ಯರ ಸಂಘದ ಸ್ಥಾಪನೆ ಮತ್ತು ಬೆಳವಣಿಗೆಗೆ ಶ್ರಮಿಸಿದ್ದರು. ಪುತ್ತೂರು ಶಾಖೆ ಸ್ಥಾಪಕಾಧ್ಯಕ್ಷರಾಗಿ ಬಂಟ್ವಾಳದಲ್ಲಿ ಎರಡು ಬಾರಿ ರಾಜ್ಯಮಟ್ಟದ ದಂತವೈದ್ಯರ ಸಮಾವೇಶ ನಡೆಸಿದ್ದರು. ತಂಬಾಕು ವಿರುದ್ಧ ಆಂದೋಲನ ನಡೆಸಿದ್ದ ಇವರ ನಿಧನಕ್ಕೆ ದಂತ ವೈದ್ಯರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
