ಬಂಟ್ವಾಳ: ಅಮ್ಮೇಂಬಳ ಸಹಕಾರಿ ಬ್ಯಾಂಕಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ನಾಗರಾಜ್ ಭಟ್ ಮತ್ತು ಮಂಗಳೂರು ಸಹಕಾರಿ ಇಲಾಖೆಯಲ್ಲಿ ಸಹಾಯಕ ನಿಬಂಧಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ವಯೋನಿವ್ರತ್ತಿಹೊಂದಿದ ಜನಾರ್ಧನ ಇವರನ್ನು ಬಂಟ್ವಾಳ ಪ್ರಾಥಮಿಕ ಕೃಷಿ ಪತ್ತಿನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಹಕಾರಿ ಒಕ್ಕೂಟದ ವತಿಯಿಂದ ಬಿಸಿರೋಡಿನ ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ.ಜಿ ರಾಜರಾಂಭಟ್, ಭೂ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ ಜೈನ್, ಸಹಕಾರಿ ಅಭಿವೃದ್ದಿ ಅಧಿಕಾರಿ ತ್ರಿವೇಣಿರಾವ್ ಕೆ , ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರಾದ ನಂದಿನಿ ರಾವ್ ಬಿಸಿರೋಡು ಶಾಖೆಯ ಪ್ರಭಾರ ವ್ಯವಸ್ಥಾಪಕಿ ಜ್ಯೋತಿ, ವಲಯ ಮೇಲ್ವಿಚಾರಕರಾದ ಕೇಶವ ಕಿಣಿ ಮತ್ತು ಯೋಗೀಶ, ಪ್ರಾಥಮಿಕ ಕೃಷಿ ಪತ್ತಿನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಹಕಾರಿ ಒಕ್ಕೂಟದ ಉಪಾಧ್ಯಕ್ಷರಾದ ಆಲ್ಬರ್ಟ ಡಿಸೋಜ, ಕಾರ್ಯದರ್ಶಿ ಚೆನ್ನಪ್ಪ ಗೌಡ ಹಾಗೂ ಬಂಟ್ವಾಳ ತಾಲೂಕಿನ ಸಹಕಾರಿ ಸಂಘದ ಎಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
