ಬಂಟ್ವಾಳ:ಪ್ರಸಕ್ತ ಸಮಾಜದಲ್ಲಿ ರಕ್ತ ಚೆಲ್ಲುವ ಕಟುಕ ಮನಸ್ಸಿನ ಯುವಜನತೆಗೆ ಬದಲಾಗಿ ರಕ್ತದಾನ ಮೂಲಕ ಇನ್ನೊಬ್ಬರಿಗೆ ಜೀವದಾನ ನೀಡುವಂತೆ ಪುಣ್ಯ ಸಂಪಾದನೆ ಕೆಲಸವನ್ನು ಇಲ್ಲಿನ ಎಸ್ಸೆಸ್ಸೆಫ್ ಸಂಘಟನೆ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. 8btl-SSF

ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಎಸ್ಸೆಸ್ಸೆಫ್ ಘಟಕ ಮತ್ತು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಂಟ್ವಾಳ ಎಸ್ಸೆಸ್ಸೆಫ್ ಘಟಕ ಅಧ್ಯಕ್ಷ ವಿ. ಅಬ್ದುರ್ರಶೀದ್ ವಗ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಸಂದೇಶ ಭಾಷಣ ಮಾಡಿದರು.

ತಹಶೀಲ್ದಾರ್ ಪುರಂದರ ಹೆಗ್ಡೆ, ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಬಿ.ಸಿ.ರೋಡ್ ಸಾರಿಗೆ ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ನಾವೂರು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸಜಿಪಮೂಡ ಕಾಲೇಜಿನ ಕಾರ್ಯಾಧ್ಯಕ್ಷ ಕೆ.ಪ್ರಭಾಕರ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ರೆಡ್ಕ್ರಾಸ್ನ ಎಡ್ವರ್ಡ್ , ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಲುಕ್ಮಾನ್ ಬಿ.ಸಿ.ರೋಡ್, ಪ್ರಮುಖರಾದ ಅಬ್ದುಲ್ಲಾ ಕೊಳಕೆ, ಇಬ್ರಾಹಿಂ ಸಖಾಫಿ ಸೆರ್ಕಳ, ಶರೀಫ್ ನಂದಾವರ, ಅಕ್ಬರ್ ಅಲಿ ಮದನಿ ಆಲಂಪಾಡಿ, ಅಲಿ ಮದನಿ ಸೆರ್ಕಳ, ಮನ್ಸೂರ್ ಅಹ್ಮದ್, ಇಬ್ರಾಹಿಂ ಕರೀಂ ಕದ್ಕಾರ್, ಸ್ವಾದಿಕ್ ಕಟ್ಟತ್ತಿಲ, ಮೌಸೂಫ್ ಅಬ್ದುಲ್ಲ ಮೆಲ್ಕಾರ್, ರಫೀಕ್ ಝಹ್ರಿ ಮತ್ತಿತರರು ಇದ್ದರು.
ಕಾರ್ಯದರ್ಶಿ  ಝೈನುಲ್ ಆಬಿದೀನ್ ನಈಮಿ ಸ್ವಾಗತಿಸಿ, ಇರ್ಷಾದ್ ಗೂಡಿನಬಳಿ ವಂದಿಸಿದರು.

By suddi9

Leave a Reply

Your email address will not be published. Required fields are marked *